ಫಾರಂ ನಂ. 3 ನೀಡಲು ಆಗ್ರಹ

Protest in Mundgod
Published on

ಮುಂಡಗೋಡ: ಫಾರಂ ನಂ. 3 ವಿತರಿಸುವಂತೆ ಒತ್ತಾಯಿಸಿ ಪಟ್ಟಣದ ವಿವಿಧ ಬಡಾವಣೆಯ ಸಾವಿರಾರು ಜನರು ಬ್ರಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಪಟ್ಟಣ ಪಂಚಾಯಿತಿ ಕಚೇರಿ ಎದುರು ಕೆಲ ಸಮಯ ಧರಣಿ ನಡೆಸಿದ ಘಟನೆ ಮಂಗಳವಾರ ಜರುಗಿತು.

ಪಟ್ಟಣದ ಇಂದಿರಾನಗರ, ಆನಂದನಗರ, ಗಣೇಶನಗರ ಹಾಗೂ ಗಾಂಧಿನಗರದ ಸಾವಿರಾರರು ಜನರು ಫಾರಂ ನಂ. 3 ವಿತರಣೆ ಮಾಡಬೇಕು ಎಂದು ಪ್ರತಿಭಟನೆ ನಡೆಸಿದರು.

ನಮ್ಮ ಮನೆಗಳ ಕರ, ನೀರಿನ ಕರ, ಎಲ್ಲವನ್ನು ಪಟ್ಟಣ ಪಂಚಾಯಿತಿಯವರು ತುಂಬಿಸಿಕೊಳ್ಳುತ್ತಾರೆ. ಆದರೆ ಮನೆಯ ದಾಖಲೆ ನೀಡುವುದಿಲ್ಲ. ಇನ್ನೂ ಕೊಳಚೆ ನಿಮೂಲನಾ ಮಂಡಳಿಯವರು ನಮಗೆ ಮನೆಗಳ ಹಕ್ಕುಪತ್ರ ನೀಡಿದ್ದಾರೆ. ಮನೆಗಳನ್ನು ನಿರ್ವಿುಸಿಕೊಂಡಿದ್ದೇವೆ ಆದರೆ ಪಟ್ಟಣ ಪಂಚಾಯಿತಿಯಿಂದ ಫಾರಂ ನಂ. 3 ಕೊಡಲು ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದರೂ ನೀಡುತ್ತಿಲ್ಲ. ನಮಗೆ ಫಾರಂ ನಂ. 3ನೀಡಬೇಕು ಇಲ್ಲದಿದ್ದರೆ ಪಟ್ಟಣ ಪಂಚಾಯಿತಿ ಎದುರು ನಿರಂತರವಾಗಿ ಧರಣಿ ನಡೆಸುತ್ತೆವೆ ಎಂದು ಎಚ್ಚರಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಸುಧಾ ಭೋವಿ ಮಾತನಾಡಿ, ಈ ಬಗ್ಗೆ ಪ್ರತ್ಯೇಕವಾಗಿ ಆಡಳಿತ ಸಮಿತಿಯ ಸಭೆಯನ್ನು ನಡೆಸಿ ಸರ್ವ ಸದಸ್ಯರೊಂದಿಗೆ ರ್ಚಚಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ನಂತರ ಮಮುಖ್ಯಾಧಿಕಾರಿ ಚಂದ್ರಶೇಖರ ಬಿ. ಮಾತನಾಡಿ, ಫಾರಂ ನಂ. 3 ನೀಡುವ ಬಗ್ಗೆ ಪಟ್ಟಣ ಪಂಚಾಯಿತಿ ಆಡಳಿತ ಸಮಿತಿಯ ಸಭೆಯಲ್ಲಿ ರ್ಚಚಿಸಿ ಹಿರಿಯ ಅಧಿಕರಿಗಳ ಮಾರ್ಗದರ್ಶನ ಪಡೆದು ಸಮಸ್ಯೆ ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಈ ವೇಳೆ ಪ್ರತಿಭಟನಾಕಾರರು ಲಿಖಿತವಾಗಿ ಬರೆದು ಕೊಡುವಂತೆ ತಿಳಿಸಿದರು. ಇದಕ್ಕೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ ನಂತರ ಪ್ರತಿಭಟನಾಕಾರರು ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಈ ಪ್ರತಿಭಟನಾ ಮೆರವಣಿಗೆಯಲ್ಲಿ ಅಲ್ಲಿಖಾನ್ ಪಠಾಣ, ವಿಠ್ಠಲ ಬಾಳಿಂಬೀಡ, ಮಹ್ಮದ ಜಾಫರ ಹಂಡಿ, ಬಸವರಾಜ ಹಳ್ಳೆಮ್ಮನವರ, ಬಸವರಾಜ ಭೋವಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net