ಕಾಡುಪ್ರಾಣಿ ತಡೆಬೇಲಿ ಅಳವಡಿಸಲು ಮನವಿ

New Project (13)
Published on

ಸುಬ್ರಹ್ಮಣ್ಯ: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಕಳಿಗೆ, ನಡುತೋಟ, ಭಾಗ್ಯ, ಕುಕ್ಕಾಜೆ, ಮೂಲೆಮನೆ, ಗೋಪಾಳಿ, ಚೇರು, ಎರ್ಮಾಯಿಲ್‌ನ ಜನರು ಆನೆ ದಾಳಿ ಮತ್ತು ಕಾಡುಕೋಣ ದಾಳಿಯಿಂದ ಅಪಾರ ಪ್ರಮಾಣದ ಕೃಷಿ ಕಳೆದುಕೊಂಡಿದ್ದಾರೆ. ಆದುದರಿಂದ ರೈಲ್ವೆ ಕಂಬಿ ಗೇಟ್‌ಗಳನ್ನು ಅರಣ್ಯ ಪ್ರದೇಶದ ಗಡಿಗೆ ಅಳವಡಿಸಲು ಸೂಕ್ತ ಕ್ರಮ ಜರುಗಿಸಬೇಕೆಂದು ಅರಣ್ಯ ಸಚಿವರಲ್ಲಿ ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಲ್ಲಿ ಮನವಿ ನೀಡಿದರು.

ಬಿಳಿನೆಲೆ ಗ್ರಾಮದ ಸರ್ವೇ ನಂ. 175ರ ಸಮಸ್ಯೆ ನಿವಾರಣೆಗೆ ಕಂದಾಯ ಹಾಗೂ ಅರಣ್ಯ ಇಲಾಖೆಯ ಜಂಟಿ ಸರ್ವೇಗೆ ಆದೇಶ ನೀಡಲು ಸುಧೀರ್ ಕುಮಾರ್ ಶೆಟ್ಟಿ ಮನವಿ ಮಾಡಿದರು. ಪ್ರಮುಖರಾದ ರಘು, ಪ್ರದೀಪ್ ಕುಮಾರ್ ಕೈಕಂಬ, ಮಾಧವ ಡಿ. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net