ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಮನವಿ

Request to fulfill various demands
ಹುನಗುಂದ ಸ್ಟೇಟ್ ಟ್ರೈಲರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಶಾಸಕ ವಿಜಯಾನಂದ ಕಾಶಪ್ಪನವರಿಗೆ ಮನವಿ ಸಲ್ಲಿಸಿದರು. ಸಂಘದ ಖಜಾಂಚಿ ಮಹಾಂತೇಶ ಕೆಸರಭಾವಿ, ಕಾರ್ಯದರ್ಶಿ ಎಂ.ಎಚ್. ಪಿಂಜಾರ ಇದ್ದರು.
Published on

ಹುನಗುಂದ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸ್ಟೇಟ್ ಟ್ರೈಲರ್ಸ್ ಅಸೋಸಿಯೇಷನ್ ಸಂಘದ ತಾಲೂಕು ಸಮಿತಿ ಪದಾಧಿಕಾರಿಗಳು ಶಾಸಕ ವಿಜಯಾನಂದ ಕಾಶಪ್ಪನವರಿಗೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಎಚ್.ಬಿ. ಒಂಟಿ ಮಾತನಾಡಿ, ರಾಜ್ಯಾದ್ಯಂತ 10 ಲಕ್ಷಕ್ಕೂ ಸ್ತ್ರೀ-ಪುರುಷ ಹೊಲಿಗೆ ಕೆಲಸಗಾರರಿಗೆ ಜೀವನ ಭದ್ರತೆ ಮತ್ತು ಟ್ರೈಲರ್ ಕ್ಷೇಮನಿಧಿ ಮಂಡಳಿ ರಚಿಸಬೇಕು. ಹೊಲಿಗೆ ವೃತ್ತಿಯನ್ನು ಜವಳಿ ನಿಗಮಕ್ಕೆ ಸೇರಿಸಬೇಕು. ಭವಿಷ್ಯ ನಿಧಿ ಮತ್ತು ಪಿಂಚಣಿ ಯೋಜನೆ ಜಾರಿಗೊಳಿಸಬೇಕು.

ಹೊಲಿಗೆ ಕೆಲಸಗಾರರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ, ಹೊಲಿಗೆ ಕೆಲಸಗಾರರಿಗೆ ವಾಸಕ್ಕಾಗಿ ಮನೆ ನಿರ್ಮಾಣ, ದುರಸ್ತಿ ಹಾಗೂ ಹೊಲಿಗೆ ಯಂತ್ರ ಖರೀದಿಸಲು ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ ನೀಡುವುದು, ಹೊಲಿಗೆ ಕೆಲಸಗಾರರಿಗೆ ಆರೋಗ್ಯ ವಿಮೆ ಜಾರಿಗೊಳಿಸುವುದು, ಹೊಲಿಗೆ ಕೆಲಸಗಾರರ ಹೆಣ್ಣು ಮಕ್ಕಳಿಗೆ ವಿವಾಹ ಧನ ಮತ್ತು ಹೆರಿಗೆ ಭತ್ಯೆ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಸಂಘದ ಖಜಾಂಚಿ ಮಹಾಂತೇಶ ಕೆಸರಭಾವಿ, ಕಾರ್ಯದರ್ಶಿ ಎಂ.ಎಚ್. ಪಿಂಜಾರ, ಸಂಗಮೇಶ ಜಂಬಲದಿನ್ನಿ, ಮಲೀಕಸಾಬ ಕಡಿವಾಲ, ಶರಣಪ್ಪ ಚಿಕ್ಕಣ್ಣವರ, ರಸೂಲ್ ಗಡೇದ, ದಾವಲ್‌ಸಾಬ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net