ಬೇಡಿಕೆ ಈಡೇರಿಸಲು ಆಗ್ರಹಿಸಿ ಮನವಿ

h30-retired employ
Published on

ಹುಬ್ಬಳ್ಳಿ: ಏಳನೇ ವೇತನ ಆಯೋಗದ ಲೆಕ್ಕಾಚಾರದಲ್ಲಿ ಆರ್ಥಿಕ ಸೌಲಭ್ಯ ನೀಡಲು ಆಗ್ರಹಿಸಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ಹಾಗೂ ಶಹರ ಶಾಖೆ ವತಿಯಿಂದ ಇಲ್ಲಿಯ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಗುರುವಾರ ಮನವಿ ರವಾನಿಸಲಾಯಿತು.

ರಾಜ್ಯದ 27,000 ನಿವೃತ್ತರಿಗೆ ಏಳನೇ ವೇತನ ಆಯೋಗದಲ್ಲಾಗಿರುವ ಆರ್ಥಿಕ ನಷ್ಟ ಸರಿದೂಗಿಸಿ ಪರಿಷ್ಕೃತ ಆದೇಶ ಹೊರಡಿಸಬೇಕು. ಮುಂಬರುವ ಬಜೆಟ್‌ನಲ್ಲಿ ಹಣ ತೆಗೆದಿರಿಸಬೇಕು. ಒಂದು ವಾರದೊಳಗೆ ಸಭೆ ಕರೆದು ಚರ್ಚಿಸಿ ಬೇಡಿಕೆ ಈಡೇರಿಸಬೇಕು ಎಂದು ವೇದಿಕೆ ರಾಜ್ಯ ಸಂಚಾಲಕ ಅಶೋಕ ಸಜ್ಜನ್ ಆಗ್ರಹಿಸಿದರು.

ಪ್ರಮುಖರಾದ ವಿಜಯ ಅಣಜಿ, ಜಿಲ್ಲಾ ಸಂಚಾಲಕರಾದ ಪಿ.ಎನ್. ಬೇಂದ್ರೆ, ಎಸ್.ಝಡ್. ಮಕಾನ್ದಾರ, ರಮೇಶ ಕೆಂಗನಾಳ, ಕೆ.ಕೆ. ಚಿಪ್ಪಾಡಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net