ಮಲಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸಲು ಮನವಿ

manavi
Published on

ನವಲಗುಂದ: ಪಕ್ಷಾತೀತ ಹೋರಾಟ ಸಮಿತಿ ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕು ವತಿಯಿಂದ ಮಲಪ್ರಭಾ ಬಲದಂಡೆ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಹಾಗೂ ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಹೋರಾಟ ಸಮಿತಿ ಅಧ್ಯಕ್ಷ ಅಂದಾನಯ್ಯ ಹಿರೇಮಠ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಮಲಪ್ರಭಾ ಬಲದಂಡೆ ಕಾಲುವೆ ನೀರನ್ನು ಇನ್ನೂ 2-3 ದಿವಸಗಳಲ್ಲಿ ಕಾಲುವೆಗೆ ಹರಿಸಬೇಕು ಮತ್ತು ಮುಂಗಾರು ಬೆಳೆಗಳು ಈಗಾಗಲೇ ಬರಗಾಲದಿಂದ ನಾಶವಾಗಿದ್ದು, ಹಿಂಗಾರು ಬೆಳೆಗಳಾದ ಕಡಲೆ, ಗೋಧಿ, ಜೋಳ ಇವುಗಳಿಗೆ ಬೇಗ ನೀರು ಹರಿಸಿದರೆ ಸ್ವಲ್ಪವಾದರೂ ಬೆಳೆ ಬರುತ್ತದೆ. ರೈತರಿಗೆ 7 ತಾಸು ನಿರಂತರ 3 ಫೇಸ್ ವಿದ್ಯುತ್ ನೀಡಬೇಕು. ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು ಮತ್ತು ರೈತರು ಪಡೆದ ಸಾಲವನ್ನು ಮರುಪಾವತಿ ಮಾಡಲು ಒತ್ತಾಯಿಸಬಾರದು ಎಂದು ಜಿಲ್ಲಾಧಿಕಾರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ

ಧಾರವಾಡ ಗ್ರಾಮೀಣ ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ಕುಂದಗೋಳಮಠ, ನವಲಗುಂದ ಮಂಡಲ ಬಿಜೆಪಿ ಅಧ್ಯಕ್ಷ ಶರಣಪ್ಪಗೌಡ ದಾನಪ್ಪಗೌಡರ, ಬಿಜೆಪಿ ಯುವ ಮುಖಂಡರಾದ ದೇವರಾಜ ದಾಡಿಬಾವಿ, ಶಂಕರಗೌಡ ರಾಯನಗೌಡ್ರ, ಮಹಾಂತೇಶ ಕಲಾಲ, ಜೆಡಿಎಸ್ ಯುವ ಮುಖಂಡ ಪ್ರಕಾಶ ಅಂಗಡಿ, ಬಿಜೆಪಿ ಎಸ್​ಸಿ ಮೋರ್ಚಾ ಅಧ್ಯಕ್ಷ ಮಹೇಶ ತೊಗಲಂಗಿ, ಎನ್.ಬಿ. ಸವದಿ, ಗುರುಸಿದ್ದಪ್ಪ ಮೆಣಸಿನಕಾಯಿ, ಶೇಖಣ್ಣ ಬಕ್ಕಣ್ಣವರ್, ಮಂಜುನಾಥ ಹೆಬಸೂರ, ಬಸನಗೌಡ ಮರಿಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net