ಬೆಳಗಾವಿ, ಖಾನಾಪುರ ಬರಪೀಡಿತವೆಂದು ಘೋಷಿಸಿ ಮನವಿ

Screenshot_2023-09-07-20-41-01-99.jpg
Published on

ಬೆಳಗಾವಿ: ಮುಂಗಾರು ಮಳೆ ಕೊರತೆಯಿಂದ ಪ್ರಸಕ್ತ ಸಾಲಿನ ಮುಂಗಾರು ಬೆಳೆಗಳು ನಾಶವಾಗುತ್ತಿವೆ. ಬೆಳಗಾವಿ ಜಿಲ್ಲೆಯ ಬೆಳಗಾವಿ, ಖಾನಾಪುರ ತಾಲೂಕುಗಳನ್ನೂ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದಿಂದ ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
 ಮಳೆ ಕೊರತೆಯಿಂದ ಮುಂಗಾರು ಬೆಳೆಗಳಾದ ಭತ್ತ, ಕಬ್ಬು, ಸೋಯಾಬಿನ್ ಶೇಂಗಾ, ಗೋವಿನ ಜೋಳ, ಬಟಾಟಿ ಬೆಳೆ ನಾಶವಾಗುತ್ತಿದೆ. ಮತ್ತೊಂದು ಕಡೆ ವಿದ್ಯುತ್ ಕೊರತೆ, ಮೇವಿನ ಕೊರತೆಯಾಗಿದ್ದು, ರೈತರು ಪರದಾಡುವಂತಾಗಿದೆ. ರೈತರು ಸಾಲ ಬಾಧೆ ಸಮಸ್ಯೆಯೊಂದಿಗೆ ಬೆಳೆದ ಬೆಳೆ ಕೈಗೆ ಸಿಗದಂತಾಗಿದೆ. ಹೀಗಾಗಿ ಬೆಳಗಾವಿ ಹಾಗೂ ಖಾನಾಪುರ ತಾಲೂಕುಗಳನೂ ಬರಪೀಡಿತ ಪ್ರದೇಶವೆಂದು ಘೋಷಿಸಿ ತಾಲೂಕಿನ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
 ಮಂಜುನಾಥ ವಸ್ತ್ರದ, ಬಸವರಾಜ ಡೊಂಗರಗಾವಿ, ಶೇಖಯ್ಯ ಪರವಯ್ಯನವರ, ಮಹದೇವ ಅರಗಂಜಿ, ಅಮೃತ ಜಾಧವ, ಸಿದ್ದಪ್ಪ ನಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net