ನಿಗಮ ಮಡಳಿ ಸ್ಥಾಪಿಸಲು ಮನವಿ

gajendragada
Published on

ಗಜೇಂದ್ರಗಡ: ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ ನಿಗಮ ಮಡಳಿ ಸ್ಥಾಪಿಸುವಂತೆ ಒತ್ತಾಯಿಸಿ ಪಟ್ಟಣದ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜ ಪಂಚ ಟ್ರಸ್ಟ್ ಕಮಿಟಿ ವತಿಯಿಂದ ಶುಕ್ರವಾರ ತಹಸಿಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಟ್ರಸ್ಟ್ ಕಮಿಟಿ ಅಧ್ಯಕ್ಷ ವಿಶ್ವನಾಥಸಾ ಮೇಘರಾಜ ಮಾತನಾಡಿ, ‘ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜವು ಕೆಟಗೆರಿ 2ಎನಲ್ಲಿ ಬರುತ್ತಿದ್ದು ನಮ್ಮ ಸಮಾಜವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಬಹಳ ಹಿಂದುಳಿದಿದೆ. ರಾಜ್ಯಾದ್ಯಂತ ನಮ್ಮ ಸಮಾಜದ 40 ಲಕ್ಷ ಜನರಿದ್ದಾರೆ.

ಹೀಗಾಗಿ ಸಮಾಜದ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ನಿಗಮ ಮಂಡಳಿ ರಚಿಸಬೇಕು’ಎಂದರು.

ಭಾಸ್ಕರಸಾ ಶಿಂಗ್ರಿ, ಬಾಲಚಂದ್ರಸಾ ರಾಯಬಾಗಿ, ದತ್ತೂಸಾ ಬಾಕಳೆ, ಮೋಹನಸಾ ರಾಯಬಾಗಿ, ವೆಂಕೂಸಾ ಶಿಂಗ್ರಿ, ಮೋತಿಲಾಲಸಾ ನಗರಿ, ಹನಮಂತಸಾ ಜರತಾರಿ, ನಾರಾಯಣಸಾ ಅರಸಿದ್ದಿ, ಬಾಬಣಸಾ ರಾಜೋಳಿ, ರವಿಂದ್ರಸಾ ಶಿಂಗ್ರಿ, ಗೋಪಿನಾಥಸಾ ಭಾಂಡಗೆ, ನಾಗೇಶ ಶಿಂಗ್ರಿ, ಸುರೇಶ ರಂಗ್ರೇಜಿ, ಸರಸ್ವತಿಬಾಯಿ ಶಿಂಗ್ರಿ, ಶಾರದಾಬಾಯಿ ರಾಯಬಾಗಿ, ವಿದ್ಯಾ ರಾಯಬಾಗಿ, ಸಹನಾ ರಂಗ್ರೇಜಿ, ಸವಿತಾ ರಾಯಬಾಗಿ, ಮಂಜುಳಾ ಖೋಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net