ಮಳಿಗೆ ಹರಾಜು ಪ್ರಕ್ರಿಯೆ ಶಿರಹಟ್ಟಿಯಲ್ಲೇ ನಡೆಸಲು ಮನವಿ

SHIRAHATTI
ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಿಂದ ಶಿರಹಟ್ಟಿಯಲ್ಲಿ ನಿರ್ಮಿಸಲಾದ ವಾಣಿಜ್ಯ ಮಾರಾಟ ಮಳಿಗೆಗಳ ಟೆಂಡರ್ ಹರಾಜನ್ನು ಲಕ್ಷ್ಮೇಶ್ವರ ಬದಲಾಗಿ ಶಿರಹಟ್ಟಿಯಲ್ಲಿಯೇ ನಡೆಸುವಂತೆ ಆಗ್ರಹಿಸಿ ಸ್ಥಳೀಯ ನಾಗರಿಕರು ತಹಸೀಲ್ದಾರ್ ಮೂಲಕ ಲಕ್ಷ್ಮೇಶ್ವರ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು. ನಾಗರಾಜ ಲಕ್ಕುಂಡಿ, ಫಕೀರೇಶ ರಟ್ಟಿಹಳ್ಳಿ, ಬಸವರಾಜ ವಡವಿ, ರಾಮು ಕಂಬಳಿ, ಅಕ್ಬರ ಯಾದಗೀರ ಇತರರಿದ್ದರು.
Published on

ಶಿರಹಟ್ಟಿ: ಶಿರಹಟ್ಟಿ ಕೃಷಿ ಉತ್ಪನ್ನ ಉಪ ಮಾರುಕಟ್ಟೆಗೆ ಸಂಬಂಧಿಸಿದಂತೆ ನಿರ್ಮಿಸಲಾದ ವಾಣಿಜ್ಯ ಮಳಿಗೆಗಳಿಗೆ ಜು. 6 ರಂದು ಲಕ್ಷ್ಮೇಶ್ವರದಲ್ಲಿ ನಡೆಸಲು ನಿರ್ಧರಿಸಲಾದ ಟೆಂಡರ್ ಹರಾಜು ಪ್ರಕ್ರಿಯೆಯನ್ನು ಶಿರಹಟ್ಟಿಯಲ್ಲಿಯೇ ನಡೆಸಬೇಕು ಎಂದು ಆಗ್ರಹಿಸಿ ಸ್ಥಳೀಯ ನಾಗರಿಕರು ಬುಧವಾರ ತಹಸೀಲ್ದಾರ್ ಅನಿಲ ಬಡಿಗೇರ ಮೂಲಕ ಲಕ್ಷ್ಮೇಶ್ವರ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.

ನಾಗರಾಜ ಲಕ್ಕುಂಡಿ, ಫಕೀರೇಶ ರಟ್ಟಿಹಳ್ಳಿ ಮಾತನಾಡಿ, ಶಿರಹಟ್ಟಿಯಲ್ಲಿನ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯ ಪ್ರಾಂಗಣದಲ್ಲಿ ಲಕ್ಷಾಂತರ ರೂ. ಅನುದಾನದಡಿ ನಿರ್ಮಿಸಲಾದ ವಾಣಿಜ್ಯ ಮಾರಾಟ ಮಗಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಜು. 6 ರಂದು ಲಕ್ಷ್ಮೇಶ್ವರದ ಆಡಳಿತ ಕಚೇರಿ ಸಭಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಕಾರಣ ವ್ಯಾಪಾರ ವಹೀವಾಟಿಗೆ ಮಳಿಗೆ ಅಗತ್ಯತೆ ಕೋರಿ 60 ಸ್ಥಳೀಯರು ಅರ್ಜಿ ಸಲ್ಲಿಸಿದ್ದು ಅವರಲ್ಲಿ ಕೆಲವರು ಅಂಗವಿಕಲರು, ಮಹಿಳೆಯರಿದ್ದಾರೆ. ಹೀಗಾಗಿ ಅವರಿಗಾಗುವ ತೊಂದರೆ ತಪ್ಪಿಸಲು ಹರಾಜ ಪ್ರಕ್ರಿಯೆ ಶಿರಹಟ್ಟಿಯಲ್ಲಿಯೇ ನಡೆಸಬೇಕು ಎಂದು ಒತ್ತಾಯಿಸಿದರು.

ಬಸವರಾಜ ವಡವಿ, ಅಕ್ಬರ ಯಾದಗೀರ, ರಾಮು ಕಂಬಳಿ, ನದೀಮ ಮನಿಯಾರ, ಆರ್.ಕೆ. ಗಡಾದ, ನಾಗರಾಜ ಧನವೆ, ಎಸ್.ಕೆ. ಟಪಾಲ, ಎ.ಎಸ್. ಕೋಳಿ, ಡಿ.ಟಿ. ಪೂಜಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net