

ಕೊಕ್ಕಡ: ಕೊಕ್ಕಡ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ಸಿಬ್ಬಂದಿಯ ಉದ್ಧಟತನದ ಸೇವಾ ವೈಖರಿ, ಅವ್ಯವಹಾರ ಮತ್ತು ಪ್ರಾಮಾಣಿಕ ಚಿನ್ನ ಪರಿಶೋಧಕರಾಗಿದ್ದ ಪದ್ಮನಾಭ ಆಚಾರ್ಯ ಅವರನ್ನು ಏಕಾಏಕಿ ಕೈ ಬಿಟ್ಟಿರುವ ಕ್ರಮ ರದ್ದು ಪಡಿಸಿ, ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಬೆಂಗಳೂರಿಗೆ ತೆರಳಿ ಬ್ಯಾಂಕಿನ ರಾಜ್ಯ ಮುಖ್ಯ ಪ್ರಧಾನ ವ್ಯವಸ್ಥಾಪಕರಿಗೆ ಹೋರಾಟ ಸಮಿತಿ ಪರವಾಗಿ ಕಾರ್ಮಿಕ ಮುಖಂಡ, ವಕೀಲ ಬಿ.ಎಂ.ಭಟ್ ಮನವಿ ಸಲ್ಲಿಸಿದರು. ಕೊಕ್ಕಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹೋರಾಟ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಶಬರಾಯ ಇದ್ದರು.