ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಲು ಮನವಿ

15 RTL 03
Published on

ರಟ್ಟಿಹಳ್ಳಿ: ರಟ್ಟಿಹಳ್ಳಿ ಮತ್ತು ಹಿರೇಕೆರೂರು ವ್ಯಾಪ್ತಿಯ 88 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆ ಪದಾಧಿಕಾರಿಗಳೂ ತುಂಗಾ ಮೇಲ್ದಂಡೆ ವಲಯ ಕಚೇರಿ ಅಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೂದಿಹಳ್ಳಿ ಮಾತನಾಡಿ, ಶಿವಮೊಗ್ಗ ತುಂಗಾ ಮೇಲ್ದಂಡೆ ಯೋಜನೆ ವಲಯ ಕರ್ನಾಟಕ ನೀರಾವರಿ ನಿಗಮ ವತಿಯಿಂದ 2019ರಲ್ಲಿ 185 ಕೋಟಿ ರೂ. ವೆಚ್ಚದಲ್ಲಿ ಸರ್ವಜ್ಞ ಏತನೀರಾವರಿ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಯೋಜನೆಯಡಿ 2020ಕ್ಕೆ 88 ಕೆರೆಗಳಿಗೆ ನೀರು ತುಂಬಿಸಬೇಕಾಗಿತ್ತು, 5 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಆ.15ರೊಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಸಂಘಟನೆಯ ಮಹೇಶ ಕೊಟ್ಟೂರು, ಶಿವಣ್ಣ ಜವನವರ, ವಿಜಯಕುಮಾರ ಕೋಣನತಲಿ, ಶಿವಾನಂದಪ್ಪ ಜಾಡರ, ಕುಮಾರ ಗವಿಯಪ್ಪನವರ, ಲೋಕಪ್ಪ ಸಂಕೊಳ್ಳಿ, ಕಲೀಲ ದೊಡ್ಡಮನಿ, ಶಿದ್ದನಗೌಡ, ಈರನಗೌಡ ದೊಡ್ಡಗೌಡ್ರು, ರಾಮನಗೌಡ ಗಂಗಮ್ಮನವರ, ವೀರಭದ್ರಪ್ಪ, ಬಿ.ಕೆ.ಬತ್ತಿಕೊಪ್ಪ, ಹನುಮಂತ ಶಿರಗಂಬಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net