ಎಂಒ4 ತಳಿ ಭತ್ತದ ಬಿತ್ತನೆ ಬೀಜ ಪೂರೈಕೆಗೆ ಸಿಎಂಗೆ ಮನವಿ

images (2)
Published on

ಉಡುಪಿ: ಜಿಲ್ಲೆಯಾದ್ಯಂತ ಕೃಷಿ ಇಲಾಖೆಯಲ್ಲಿ ಎಂಒ4 ತಳಿಯ ಭತ್ತದ ಬಿತ್ತನೆ ಬೀಜದ ಕೊರತೆಯಿಂದ ಜಿಲ್ಲೆಯ ಕೃಷಿಕರು ಕೃಷಿ ಚಟುವಟಿಕೆ ಆರಂಭಿಸಲು ಸಮಸ್ಯೆ ಎದುರಿಸುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಜಿಲ್ಲೆಗೆ ಅಗತ್ಯ ಪ್ರಮಾಣದ ಬೀಜವನ್ನು ಪೂರೈಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 38,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯುತ್ತಿದ್ದು, ಭತ್ತದ ಬಿತ್ತನೆ ಬೀಜದ ಕೊರತೆಯಿಂದ ಮುಂಗಾರು ಪೂರ್ವಭಾವಿ ಕೃಷಿಗೆ ತೊಂದರೆಯಾಗಿದೆ. ಎಂಒ4 ಭತ್ತದ ಬೀಜ ದರದಲ್ಲಿ ಗಣನೀಯ ಏರಿಕೆಯಾಗಿದ್ದು, ಸರ್ಕಾರ ಪ್ರತಿ ಕಿಲೋಗೆ ರೂ. 9.25 ಹೆಚ್ಚಿಸಿ ರೂ. 55.25 ದರ ನಿಗದಿ ಮಾಡಿದೆ. ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಜಿಲ್ಲೆಯ ಬೇಡಿಕೆಗೆ ಅನುಗುಣವಾಗಿ ಭತ್ತದ ಬೀಜವನ್ನು ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net