

ಕಾರವಾರ: ನಗರದಿಂದ- ಕೈಗಾ -ಇಳಕಲ್ ಸಂರ್ಪಸುವ ರಾಜ್ಯ ಹೆದ್ದಾರಿಯಲ್ಲಿ ಕೆಲವು ಮರಗಳು ರಸ್ತೆಗೆ ಬೀಳುವ ಹಂತದಲ್ಲಿದ್ದು, ಅವುಗಳನ್ನು ತೆರವು ಮಾಡುವಂತೆ ಕರವೇ ನಗರ ಘಟಕದ ಅಧ್ಯಕ್ಷ ರಾಜಾ ನಾಯ್ಕ ಕಡವಾಡ ಮನವಿ ಮಾಡಿದ್ದಾರೆ.
ಹೆದ್ದಾರಿಯಲ್ಲಿನ ಕಡವಾಡ ವ್ಯಾಪ್ತಿಯಲ್ಲಿ ನಂದವಾಳದಿಂದ ಮಾರುತಿ ದೇವಸ್ಥಾನದ ಕ್ರಾಸ್ವರೆಗಿನ ಎರಡು ಕಡೆ ತುಂಬಾ ಹಳೆಯದಾದ ಬೃಹತ್ ಎರಡು ಮಾವಿನ ಮತ್ತು ಒಂದು ಹುಣಸೆ ಮರಗಳು ಅಪಾಯದ ಸ್ಥಿತಿಯಲ್ಲಿವೆ. ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.</