ರಾಮಾಪುರದ ಮಾರ್ಗವಾಗಿ ಬಸ್ ಸಂಚರಿಸುವಂತೆ ಮನವಿ

MM Hills
Published on

ಹನೂರು: ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಬಸ್ ರಾಮಾಪುರದ ಮಾರ್ಗವಾಗಿ ಸಂಚರಿಸುವಂತೆ ಹನೂರು ಕೃಷಿ ಮಾರುಕಟ್ಟೆ ಮಾಜಿ ಸದಸ್ಯ ರಾಮಾಪುರದ ಎಂ.ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.

ಮ.ಬೆಟ್ಟದಿಂದ ಬೆಂಗಳೂರಿಗೆ ತೆರಳುವ ಪ್ರಾಧಿಕಾರ ಬಸ್ ಬೆಳಗ್ಗೆ ರಾಮಾಪುರ ಮಾರ್ಗವಾಗಿ ಸಂಚರಿಸುತ್ತದೆ. ಇದರಿಂದ ಈ ಭಾಗದ ಜನರು, ವಿದ್ಯಾರ್ಥಿಗಳು ಹಾಗೂ ಭಕ್ತರಿಗೆ ಅನುಕೂಲವಾಗಿದೆ. ಆದರೆ ಬೆಂಗಳೂರಿನಿಂದ ಮ.ಬೆಟ್ಟಕ್ಕೆ ತೆರಳುವ ಸಂಜೆಯ ವೇಳೆ ರಾಮಾಪುರದ ಮಾರ್ಗವಾಗಿ ಆಗಮಿಸದೆ ಎಲ್ಲೇಮಾಳ ಗ್ರಾಮದ ಮಾರ್ಗವಾಗಿ ಸಂಚರಿಸುತ್ತಿದೆ. ಇದರಿಂದ ಬೆಂಗಳೂರಿನಿಂದ ಆಗಮಿಸುವವರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಆದ್ದರಿಂದ ಪ್ರಾಧಿಕಾರದ ಕಾರ್ಯದರ್ಶಿ ಗಮನಹರಿಸಿ ಸಂಜೆಯ ವೇಳೆ ಬಸ್ ರಾಮಾಪುರದ ಮಾರ್ಗವಾಗಿ ಸಂಚರಿಸುವಂತೆ ಅನುವು ಮಾಡಿಕೊಡುವುದರ ಮೂಲಕ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net