ಮೊರಾರ್ಜಿ ನಗರ ರಸ್ತೆ ಅಭಿವೃದ್ಧಿಪಡಿಸಿ, ಶಾಸಕ ಬೆಲ್ಲದಗೆ ಕ್ಷೇಮಾಭಿವೃದ್ಧಿ ಸಂಘದ ಮನವಿ

IMG_20240730_205951_544-1.jpg
Published on

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಮೊರಾರ್ಜಿ ನಗರ 2ನೇ ಹಂತದ ನಾಲ್ಕು ಉಪರಸ್ತೆಗಳನ್ನು ಕಾಂಕ್ರಿಟ್ ಮಾಡಿಸಿಕೊಡಬೇಕೆಂದು ಮೊರಾರ್ಜಿನಗರದ ಕ್ಷೇಮಾಭಿವೃದ್ಧಿ ಸಂಘದ ಹಾಗೂ ಮಹಿಳಾ ಮಂಡಳದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಶಾಸಕ ಅರವಿಂದ ಬೆಲ್ಲದ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ಈ ಕುರಿತು ಮನವಿ ಸಲ್ಲಿಸಲಾಗಿದೆ.

ಮುರಾರ್ಜಿ ನಗರದ ನಾಲ್ಕು ಉಪ ರಸ್ತೆಗಳು ತೀರಾ ಹದಗೆಟ್ಟಿವೆ. ಜನರು ನಡೆದಾಡಲು ಪರದಾಡುತ್ತಿದ್ದಾರೆ. ಅನೇಕರು ರಸ್ತೆ ದಾಟುವಾಗ ಕೆಸರಿನಲ್ಲಿ ಬಿದ್ದು ಗಾಯಗೊಂಡಿದ್ದಾರೆ. ರಸ್ತೆ ಸರಿ ಇಲ್ಲದ ಕಾರಣಕ್ಕೆ ಗ್ಯಾಸ್ ಸಿಲಿಂಡರ್ ಪೂರೈಕೆ ವಾಹನಗಳು ಬರುತ್ತಿಲ್ಲ. ಅಗತ್ಯ ವಸ್ತುಗಳಿಗಾಗಿ ಜನರು ಪರದಾಡಬೇಕಿದೆ.

ಬೀದಿ ದೀಪಗಳಿಲ್ಲದೆ ರಾತ್ರಿ ಹುಳು ಹುಪ್ಪಡಿಗಳ ಕಾಟ ಜಾಸ್ತಿಯಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಬಡಾವಣೆ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ನಾಗರಾಜ ನಾಡಕರ್ಣಿ, ರವಿ ಅರ್ಕಸಾಲಿ, ಮದನ ಕಾಳೆ, ಕಲ್ಲಪ್ಪ ಹೊನ್ನಳ್ಳಿ, ಎಸ್.ಎಲ್. ರಾಯ್ಕರ, ಮಾಧವ ಕುಲಕರ್ಣಿ, ಸದಾನಂದ ಮಾಮನಿ, ಗಂಗಪ್ಪ ಕುಲ್ಲೊಳ್ಳಿ ಹಾಗೂ ಮಹಿಳಾ ಮಂಡಳದ ರಚನಾ ಅಂಬಲೆ, ಶಾಂತವ್ವ ಹೊನ್ನಳ್ಳಿ, ಬಿಬಿಜಾನ, ಸಂಗೀತಾ ಮಣಕಟ್ಟಿ, ಇತರರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net