ಒನ್ ವೇ ಸಂಚಾರ ವ್ಯವಸ್ಥೆ ಮಾಡಲು ಮನವಿ

Request to arrange one way traffic
Published on

ಶಿಗ್ಗಾಂವಿ: ಪಟ್ಟಣದ ಹೊಸ ಬಸ್ ನಿಲ್ದಾಣದಿಂದ ಹಳೇ ಬಸ್ ನಿಲ್ದಾಣ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಒನ್ ವೇ (ಏಕಮುಖ) ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಶಂಕರನಾಗ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದವರು ತಹಸೀಲ್ದಾರ್ ಸಂತೋಷ ಹಿರೇಮಠ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳು, ವಾಣಿಜ್ಯ ಮಳಿಗೆ ಇದ್ತರೆ ವ್ಯಾಪಾರ ವಹಿವಾಟು ಹೆಚ್ಚು ಇರುವ ಹೊಸ ಬಸ್ ನಿಲ್ದಾಣದಿಂದ ಹಳೇಬಸ್ ನಿಲ್ದಾಣ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳು, ವಾಣಿಜ್ಯ ಮಳಿಗೆಗಳು ಇವೆ. ಇಲ್ಲಿನ ವ್ಯವಹಾರ, ಖರೀದಿಗೆ ಪ್ರತಿನಿತ್ಯ ಪಟ್ಟಣಕ್ಕೆ ಬರುವ ಜನರು ರಸ್ತೆಯಲ್ಲಿಯೇ ತಮ್ಮ ವಾಹನ ನಿಲ್ಲಿಸುತ್ತಿದ್ದಾರೆ. ಇದರಿಂದ ಟ್ರಾಫಿಕ್ ಕಿರಿಕಿರಿ ಉಂಟಾಗಿ ಪದೇಪದೆ ಅವಘಡಗಳು ಸಂಭವಿಸುತ್ತಿವೆ. ಅಲ್ಲದೆ, ನಿತ್ಯವೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಪಾದಚಾರಿಗಳ ಮತ್ತು ವಾಹನ ಸವಾರರ ಅನುಕೂಲದ ದೃಷ್ಟಿಯಿಂದ ಪೊಲೀಸ್ ಇಲಾಖೆಗೆ ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ಸೂಕ್ತ ನಿರ್ದೇಶನದ ನೀಡಿ ಒನ್ ವೇ ಸಂಚಾರಕ್ಕೆ ಆದೇಶ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಸಂಘದ ಅಧ್ಯಕ್ಷ ಗೌಸಮೋದಿನ ದುಂಡಿಶಿ, ಉಪಾದ್ಯಕ್ಷ ಗುರುನಗೌಡ ದುಂಡಿಗೌಡ್ರ, ಕಾರ್ಯದರ್ಶಿ ಹನುಮಂತ ಬಂಡಿವಡ್ಡರ, ಖಜಾಂಚಿ ಮಂಜುನಾಥ ತಳವಾರ, ಸದಸ್ಯರಾದ ನಾಗರಾಜ ಹಾವಣ್ಣವರ, ಷಣ್ಮುಖ ರಾಣಪ್ಪನವರ, ಖಾಸೀಂ ಹಲಗಿಬಡಿ, ಅಬ್ಬಾಸಅಲಿ, ತಾಜುದ್ದೀನ್ ನದಾಫ, ಅಶೋಕ ಗೌರಣ್ಣವರ, ಸದ್ದಾಂ ತಾಳಿಕೋಟಿ, ಸಚಿನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net