ಪರಿಶಿಷ್ಟ ಪಂಗಡಕ್ಕೆ ಹಾಲಕ್ಕಿ ಸಮಾಜ ಸೇರಿಸಲು ಮನವಿ

18 ANK 1
Published on

ಅಂಕೋಲಾ: ಹಾಲಕ್ಕಿ ಜನಾಂಗದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಉ.ಕ. ಹಾಲಕ್ಕಿ ಒಕ್ಕಲಿಗರ ಸಂಘದ ನಿಯೋಗ ಇತ್ತೀಚೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾಗೇರಿ ಅವರು, ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವ ಪ್ರಯತ್ನಗಳು ನಡೆಯುತ್ತಲೇ ಇವೆ. ಜತೆೆಗೆ ಕುಣಬಿಗಳು, ಗೌಳಿಗಳು ಸೇರಿದಂತೆ ಕೆಲ ಜನಾಂಗಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವುದು ಚರ್ಚೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ನಿರಂತರವಾಗಿ ಸಾಗಿದೆ ಎಂದರು.

ಹಾಲಕ್ಕಿ ಜನಾಂಗದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲೇಬೇಕು ಎಂಬುದು ಕೇಂದ್ರ ಸರ್ಕಾರದಲ್ಲಿಯೂ ಪ್ರಯತ್ನಗಳು ನಿರಂತರವಾಗಿ ಸಾಗಿವೆ. ಒಂದು ಜನಾಂಗವನ್ನು ಈ ರೀತಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವಾಗ ಅದರದೆ ಆದ ತಾಂತ್ರಿಕ ಕಾರಣಗಳು ಇರುತ್ತವೆ. ಜತೆಗೆ ಅಧ್ಯಯನಗಳು ಅಗತ್ಯವಾಗಿರುತ್ತವೆ. ಈ ಪ್ರಯತ್ನಗಳನ್ನು ಈ ಹಿಂದೆಯೇ ಮಾಡಿಯಾಗಿದೆ. ಈಗಲೂ ನನ್ನ ಕ್ಷೇತ್ರದಲ್ಲಿ ಬಹಳ ಹೆಚ್ಚಿನ ಸಂಖ್ಯೆಯಲ್ಲಿರುವ ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಪ್ರಯತ್ನ ಮಾಡಲಾಗುವುದು ಎಂದರು.

ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ ಮಾತನಾಡಿ, ನಮ್ಮ ಸಮಾಜ ಹಲವಾರು ವರ್ಷಗಳಿಂದ ಬಹಳ ಹಿಂದುಳಿದಿದ್ದು, ನಮ್ಮ ಜನಾಂಗಕ್ಕೂ ಆದ್ಯತೆ ಸಿಗುವ ನಿಟ್ಟಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಹಲವಾರು ವರ್ಷಗಳಿಂದ ಹೇಳುತ್ತಲೇ ಬಂದಿದ್ದೇವೆ. ಆದರೆ, ಈವರೆಗೂ ಆ ಕಾರ್ಯ ಮಾತ್ರ ಸಂಪೂರ್ಣಗೊಂಡಿಲ್ಲ ಎಂದರು.<

ಪ್ರಕಾಶ ಗೌಡ, ಮಂಗೂಗೌಡ ಸಣ್ಣಪ್ಪ ಗೌಡ, ಮಂಕಾಳಿ ಗೌಡ, ಶಂಕರ್ ಗೌಡ ಹೆಗ್ರೆ, ಬಲಿಂದ್ರ ಗೌಡ ಮೂಲೆಕೇರಿ, ಕೋಶಾಧ್ಯಕ್ಷ ಪರಮೇಶ್ವರ ಗೌಡ ಹೊನ್ನಾವರ, ವಿಷ್ಣು ಗೌಡ ಮಾದೇವ ಗೌಡ, ಬೆಳಂಬರ ಶಂಕರ್ ಗೌಡ ಬೆಳೆಸೆ, ಬಿ.ಎಸ್. ಗೌಡ, ಕಾರ್ಯದರ್ಶಿ ಪುರುಷೋತ್ತಮ್ ಗೌಡ ರಮಕಾಂತಗೌಡ, ಆರತಿ ಗೌಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net