

ರಾಯಚೂರು ಮಹರ್ ಜಾತಿಯನ್ನು ಚಲುವಾದಿ ಮತ್ತು ಹೊಲೆಯ ಉಪ ಜಾತಿಗಳಿಗೆ ಸಮನಾರ್ಥಕವಾಗಿ ಸೇರ್ಪಡೆ ಮಾಡದಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಡಾ.ಅಂಬೇಡ್ಕರ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಮಿತ್ರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣಕ್ಕೆ ರಾಜ್ಯಸರ್ಕಾರ ರಚಿಸಿರುವ ನ್ಯಾಯಮೂರ್ತಿ ನಾಗಮೋಹನದಾಸ ಎಕ ಸದಸ್ಯ ಆಯೋಗದಕ್ಕೆ ಮನವಿ ಮಾಡಲಾಗಿದೆ. ಡಾ.ಬಿ.ಆರ್.ಅಂಬೇಡ್ಕರವರು ಮೂಲತಃ ಪರ್ವಾರಿ ಮತ್ತು ಬರೋಡಾ ಮಹಾರಾಜರ ಮಿಲಿಟ್ಟಿರಿಯಲ್ಲಿ ಅಕೌಂಟೆAಟ್ ಆಗಿ ಕೆಲಸ ಮಾಡುತ್ತಿದ್ದಾಗ ಅವರು ಜಾತಿ ಹೆಸರು ಪರ್ವಾರಿ ಎಂದು ನಮುದಾಗಿರುತ್ತದೆ. ಈಸ್ಟ್ ಇಂಡಿಯಾ ಕಂಪನಿ ಕಾಲದ ಸೈನ್ಯದಲ್ಲಿ ಮಹರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಂಡಿದು ದಾಖಲೆಗಳಲ್ಲಿ ಮಹರರನ್ನು ಪರ್ವಾರಿ ಜಾತಿಗಳವರೆಂದು ನಮೂದಿಸಿದ್ದಾರೆ
ಮಾಲಾ,ಚಲುವಾದಿ, ಹೊಲೆಯ ಸಮಾಜದವರು ಸುಳ್ಳು ಹೇಳಿ ಡಾ.ಬಿ.ಆರ್.ಅಂಬೇಡ್ಕರ ಹೆಸರು ಅಪಪ್ರಚಾರ ಮಾಡಬಾರದು ಎಂದರು. ಪರಿಶಿಷ್ಟ ಜಾತಿ ಜನರಲ್ಲಿ ಮತಾಂತರಗೊAಡವರು ಅನೇಕರು ಮೀಸಲಾತಿ ಪಡೆಯುತ್ತಿರುವ ಕುರಿತಾಗಿಯೂ ಆಯೋಗಕ್ಕೆ ಗಮನಕ್ಕೆ ತರಲಾಗಿದೆ ಎಂದರು.
ಈ ಸಂದರ್ಭದಲ್ಲಿ ನರಸಿಂಹಲು ಪೋತಗಲ್, ಉರುಕುಂದಪ್ಪ ಜಗ್ಲಿ, ಹುಸೇನ ಬಾಷಾ ಪಲಕನಮರಡಿ ಇದ್ದರು.
--------