ಜಿಎಸ್ ಟಿ ಇನ್ನಷ್ಟು ಮರುಪರಿಶೀಲನೆಗೆ ಮನವಿ

IMG-20251014-WA0013.jpg
Published on

ಹುಬ್ಬಳ್ಳಿ: ಇನ್ನೂ ಕೆಲ ವಸ್ತುಗಳ ಮೇಲೆ ಜಿಎಸ್ಟಿಯನ್ನು ಮರುಪರಿಶೀಲನೆಗೆ ಒಳಪಡಿಸಬೇಕೆಂದು ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕೋರಿದ್ದಾರೆ.

ಮಂಗಳವಾರ ನಗರಕ್ಕೆ ಆಗಮಿಸಿದ ಅವರನ್ನು ಭೇಟಿ ಮಾಡಿದ ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ ನೇತೃತ್ವದ ನಿಯೋಗವು ಈಗಾಗಲೇ ಜಿಎಸ್‌ಟಿ ಇಳಿಕೆ ಮಾಡಿದ ಕೇಂದ್ರದ ಕ್ರಮವನ್ನು ಸ್ವಾಗತಿಸಿ ಸಚಿವರನ್ನು ಅಭಿನಂದಿಸಿದರು.

ಬ್ಯಾಂಕಿಂಗ್ ನಲ್ಲಿ ಸಿಟಿಎಸ್ (ಕಂಟಿನ್ಯೂಯಸ್ ಟ್ರಾನ್ಸಾಂಕ್ಶನ್ ಸಿಸ್ಟ್ಂ) ಸುಧಾರಣೆ ಹಾಗೂ
ಪ್ಲಾಸ್ಟಿಕ್ ಪಾಲಿಮರ್ಸ್, ಮೆಟಲ್ ಇನ್ಪುಟ್ಸ್ ಲೇಬಲ್ಸ್ ಹಾಗೂ ಪ್ಯಾಕೇಜಿಂಗ್ ಮಟೆರಿಯಲ್ಸ್ ಸೇರಿ ಕೆಲ ವಸ್ತುಗಳ ಮೇಲೆ ಜಿಎಸ್ ಟಿ ಶೇ. 18 ಮುಂದುವರಿದಿದೆ. ಇವುಗಳು ಸೇರಿದಂತೆ ಇನ್ನಷ್ಟು ವಸ್ತುಗಳ ಜಿಎಸ್ ಟಿ ಕಡಿಮೆ ಮಾಡುವಂತೆ ಇದೇ ಸಂದರ್ಭದಲ್ಲಿ ಮನವಿ ಸಲ್ಲಿಸಿದರು.

ಸಂಸ್ಥೆಯ ಮನವಿಗೆ ಸ್ಪಂದಿಸಿದ ಸಚಿವೆ ನಿರ್ಮಲಾ ಅವರು ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಕರ್ನಾಟಕ ವಾಣಿಜ್ಯೋದ್ಯಮ ಉಪಾಧ್ಯಕ್ಷರಾದ ಪ್ರವಿಣ ಅಗಡಿ, ಸಿದ್ದೇಶ್ವರ ಕಮ್ಮಾರ ಮತ್ತು ವೀರಣ್ಣ ಕಲ್ಲೂರ, ಗೌರವ ಕಾರ್ಯದರ್ಶಿ ಉದಯ ರೇವಣಕರ ಹಾಗೂ ಜೊತೆ ಗೌರವ ಕಾರ್ಯದರ್ಶಿ ಪ್ರಕಾಶ ಶೃಂಗೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net