

ನರಗುಂದ: ತಾಲೂಕಿನ ಕಣಕೀಕೊಪ್ಪ ಗ್ರಾಮದಲ್ಲಿ ನರೇಗಾ ಮತ್ತು ಇನ್ನಿತರ ಯೋಜನೆಯಡಿ ಪ್ರಸಕ್ತ ಸಾಲಿನ ಕಾಮಗಾರಿಯಲ್ಲಿ ಆಗಿರುವ ಕಾಮಗಾರಿ ಬಿಲ್ ತಡೆಹಿಡಿದು ಸರಿಯಾಗಿ ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಕರವೇ ಸ್ವಾಭಿಮಾನಿ ಸೇನೆ ಘಟಕದ ಸದಸ್ಯರು ತಾಪಂ ಇಒ ಎಸ್.ಕೆ. ಇನಾಮದಾರ ಅವರಿಗೆ ಮನವಿ ಸಲ್ಲಿಸಿದರು.
ಕಣಕೀಕೊಪ್ಪ ಗ್ರಾಪಂನಲ್ಲಿ ಕೈಗೊಳ್ಳಲಾದ ಬಹುತೇಕ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ. ಕೈಗೊಳ್ಳಲಾಗಿರುವ ಕಾಮಗಾರಿಗಳು ಕಳಪೆಯಾಗಿವೆ. ಗುಣಮಟ್ಟವಲ್ಲದ ಸಾಮಗ್ರಿ ಬಳಸಿ ರಸ್ತೆ ಮತ್ತು ಚರಂಡಿ ನಿರ್ವಿುಸಲಾಗಿದೆ. ಕೆಲಸ ನಿರ್ವಹಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಬೇಕು. ಕಾಮಗಾರಿ ಪೂರ್ಣಗೊಳಿಸಿದ್ದ ಬಿಲ್ಗಳನ್ನು ತಡೆಹಿಡಿಯಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಕರವೇ ಸ್ವಾಭಿಮಾನಿ ಸೇನೆಯ ಘಟಕದ ಅಧ್ಯಕ್ಷ ವಿನಾಯಕ ಛತ್ರಬಾವಿ, ಕಾವ್ಯಾ ಹುಂಬಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.