ಮೃತ ವ್ಯಕ್ತಿಯ ವಾರಿಸುದಾರರ ಪತ್ತೆಗೆ ಮನವಿ

Published on

ಮಂಗಳೂರು: ಕಳೆದ ಜನವರಿ 30ರ ರಾತ್ರಿ ಮಂಗಳೂರಿನ ಹಂಪನ್‌ಕಟ್ಟೆ ಸಮೀಪ ಡಿವೈಡರ್ ಬಳಿ ರಸ್ತೆ ದಾಟುತ್ತಿದ್ದ ಪಾದಾಚಾರಿ ವ್ಯಕ್ತಿಗೆ ಖಾಸಗಿ ಬಸ್ ಡಿಕ್ಕಿಹೊಡೆದಿದ್ದು, ಪಾದಾಚಾರಿ ವ್ಯಕ್ತಿಗೆ ತೀವ್ರಗಾಯಗಳಾಗಿದೆ. ವೆನ್ಲಾಕ್ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಪ್ರಜ್ಞಾಹಿನ ಸ್ಥಿತಿಯಲ್ಲಿರುವ ಈ ವ್ಯಕ್ತಿಯ ೆ.16ರಂದು ಮೃತಪಟ್ಟಿದ್ದಾರೆ. ಸುಮಾರು 5 ಅಡಿ ಎತ್ತರ, ಪಂಪು ಬಣ್ಣದ ಚೌಗುಳಿ ಇರುವ ಮೃತ ವ್ಯಕ್ತಿಯ ವಾರಿಸುದಾರರಿದ್ದಲ್ಲಿ ಕದ್ರಿ ಪೊಲೀಸ್ ಠಾಣೆ- 0824 2220523, ಪೊಲೀಸ್ ನಿರೀಕ್ಷಕರು 9480805337, ಸಿಟಿ ಕಂಟ್ರೋಲ್ ರೂಮ್ 0824 2220800 ಸಂಪರ್ಕಿಸುವಂತೆ ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net