

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಸ್ಲಂ ಎಂದು ಘೋಷಣೆಯಾದ ಪ್ರದೇಶಗಳಿಗೆ ಮೂಲ ಸೌಲಭ್ಯ ಒದಗಿಸಬೇಕೆಂದು ಹರಿಜನ ಹಿತವರ್ಧಕ ಸಂಘವು ಮಹಾನಗರ ಪಾಲಿಕೆಗೆ ಮನವಿ ಮಾಡಿದೆ.
ಇಲ್ಲಿಯ ಸ್ಟೇಶನ್ ರಸ್ತೆಯ ರಾಜಗೋಪಾಲನಗರ ದಶಕಗಳ ಹಿಂದೆಯೇ ಸ್ಲಂ ಎಂದು ಘೋಷಣೆಯಾಗಿದೆ. ಇಲ್ಲಿಗೆ ಸೌಲಭ್ಯ ಕಲ್ಪಿಸಬೇಕೆಂದು ಹಲವು ಬಾರಿ ಮನವಿ ಮಾಡಲಾಗಿದೆ. ಜಿಲ್ಲಾಧಿಕಾರಿ ಕೂಡ ಸೂಚನೆ ನೀಡಿದ್ದಾರೆ. ಆದರೂ, ಸೌಲಭ್ಯ ವಂಚಿತವಾಗಿದೆ.
ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಸೌಲಭ್ಯ ನೀಡಬೇಕೆಂದು ಸಂಘದ ಪದಾಧಿಕಾರಿಗಳು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.