ಓಟಿಎಸ್ ಆದ ಗ್ರಾಹಕರಿಗೆ ಸಾಲ ಮಂಜೂರು ಮಾಡುವಂತೆ ಮನವಿ

6 ckm 4
ಚಿಕ್ಕಮಗಳೂರು ಎಸಿ ದಲ್ಜಿತ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ ಕಾಂಗ್ರೆಸ್ ಕಾರ್ಯಕರ್ತರು ಓಟಿಎಸ್ ಆದ ಗ್ರಾಹಕರಿಗೂ ಸಾಲ ಮಂಜೂರಾತಿ ಮಾಡುವಂತೆ ಒತ್ತಾಯಿಸಿದರು. ಕೆ.ಭರತ್, ಮಾಚೇನಹಳ್ಳಿ ದೇವರಾಜ್, ಪಂಡವರಹಳ್ಳಿ ಪ್ರತಾಪ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಬ್ಯಾಂಕ್‌ಗಳು ಒನ್ ಟೈಮ್ ಸೆಟ್ಲ್ಮೆಂಟ್(ಓಟಿಎಸ್) ಆದ ಗ್ರಾಹಕರಿಗೆ ಸಾಲ ಮಂಜೂರು ಮಾಡುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಸಾಲ ನೀಡುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡ ಕೆ.ಭರತ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಎಸಿ ದಲ್ಜಿತ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕೆ.ಭರತ್, ಜಿಲ್ಲೆಯಲ್ಲಿ ಓಟಿಎಸ್ ಆದ ಗ್ರಾಹಕರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಇದರಲ್ಲಿ ಬಹುತೇಕ ಕೃಷಿಕರು, ರೈತಾಪಿ ವರ್ಗದವರು ಹಾಗೂ ಮದ್ಯಮ ವರ್ಗದವರು, ಸಣ್ಣಪುಟ್ಟ ವ್ಯಾಪಾರಸ್ತರು ಇದ್ದಾರೆ. ಇದೀಗ ಇವರಿಗೆ ಸಾಲ ನೀಡುವುದಿಲ್ಲ ಎಂದು ಬ್ಯಾಂಕ್‌ಗಳು ಹೇಳುತ್ತಿವೆ ಎಂದು ದೂರಿದರು.
ಬ್ಯಾಂಕ್‌ಗಳಲ್ಲಿ ಸಾಲ ಪಡೆದ ಗ್ರಾಹಕರು ನಿಗದಿತ ಅವಧಿಯೊಳಗೆ ಸಾಲ ಅಸಲು-ಬಡ್ಡಿ ಸಹಿತ ಶೇ.೮೦ ರಷ್ಟು ಹಣವನ್ನು ಸಂದಾಯ ಮಾಡಲಾಗಿರುತ್ತದೆ. ಉಳಿದ ಹಣಕ್ಕೆ ಬ್ಯಾಂಕಿನವರೇ ಈ ಸೌಲಭ್ಯದಡಿ ನಿಮಗೆ ಅನುಕೂಲವಾಗುತ್ತದೆ ಎಂದು ಹೇಳಿ ಎರಡು ಅಥವಾ ಮೂರು ಕಂತುಗಳಲ್ಲಿ ಈ ಉಳಿಕೆ ಹಣವನ್ನು ಪಾವತಿಸಿಕೊಂಡಿದ್ದಾರೆ. ನಂತರ ಸಂಬAಧಪಟ್ಟ ಬ್ಯಾಂಕ್‌ಗಳಿಗೆ ಸಾಲ ಕೇಳಲು ಹೋದರೆ ಹಿಂದೆ ಪಡೆದ ಸಾಲವನ್ನು ಓಟಿಎಸ್ ಮೂಲಕ ಪಾವತಿಸಿರುವುದರಿಂದ ನಿಮಗೆ ಸಾಲ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ನಿರಾಕರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂಬAಧ ತಾವು ಈ ಕೂಡಲೇ ಜಿಲ್ಲೆಯ ಎಲ್ಲ ರೀತಿಯ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ಎಂದಿನAತೆ ಗ್ರಾಹಕರಿಗೆ ಸಾಲ ದೊರಕುವಂತೆ ಮಾಡಬೇಕು. ಸಾಲ ನೀಡುವ ಸಂದರ್ಭದಲ್ಲಿ ಸಾಲ ಪಡೆಯುವಾತನ ಆಸ್ತಿಯ ಮಾರುಕಟ್ಟೆ ಹಾಗೂ ಸರ್ಕಾರದ ಬೆಲೆಗೆ ಅನುಗುಣವಾಗಿ ಶೇ.೬೦ರಷ್ಟು ಭಾಗದ ಸಾಲ ನೀಡಿರುತ್ತಾರೆ. ಆದರೆ ಸಾಲ ಮರುಪಾವತಿ ಅವಧಿ ೧೦ ರಿಂದ ೧೫ ವರ್ಷ ಇರುತ್ತದೆ. ಅಷ್ಟರಲ್ಲಿ ಅಡಮಾನವಿಟ್ಟಿರುವ ಆಸ್ತಿಯ ಬೆಲೆ ಕೂಡ ದ್ವಿಗುಣವಾಗಿರುತ್ತದೆ. ಹೀಗಾಗಿ ಕಾರಣಾಂತರಗಳಿAದ ಸಾಲ ಮರುಪಾವತಿ ಮಾಡಲಾಗದೇ ಇರುವ ಗ್ರಾಹಕರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿರುವುದು ಸಮಂಜಸವಲ್ಲ ಎಂದು ತಿಳಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಮಾಚೇನಹಳ್ಳಿ ದೇವರಾಜ್, ಪಂಡವರಹಳ್ಳಿ ಪ್ರತಾಪ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net