

ಕಳಸ: ಕಳಸ ಪಟ್ಟಣಕ್ಕೆ ಕಾಲಿಡುವಾಗಲೇ ಎದುರಾಗುವ ರಸ್ತೆಯಲ್ಲಿ ಬಿದ್ದಿರುವ ಹೊಂಡಗಳಿಗೆ
ಸಾರ್ವಜನಿಕರು ಗಿಡಗಳನ್ನು ನೆಟ್ಟು ತುರ್ತಾಗಿ ಗುಂಡಿಮುಚ್ಚಿ ಎಂಬ ಸಂದೇಶವನ್ನು
ಲೋಕೋಪಯೋಗಿ ಇಲಾಖೆಗೆ ಮುಟ್ಟಿಸಿದ್ದಾರೆ.
ಕಳಸ ಕಲಶೇಶ್ವರ ದೇವಸ್ಥಾನದ ಸಮೀಪ ಮುಖ್ಯರಸ್ತೆಯಲ್ಲಿ ಸಾಲು ಸಾಲು ಬಿದ್ದಿರುವ
ಗುಂಡಿಗಳಿಂದ ವಾಹನ ಸವಾರರು ಬೇಸತ್ತು ಹೊಗಿದ್ದಾರೆ. ರಸ್ತೆಯಲ್ಲಿ ಗುಂಡಿಯೋ ಅಥವಾ
ಗುಂಡಿಯಲ್ಲಿ ರಸ್ತೆಯೋ ಎನ್ನುವಂತಿದೆ. ಇದರಿಂದ ಬೇಸತ್ತ ಕೆಲ ಸಾರ್ವಜನಿಕರು ರಸ್ತೆಯಲ್ಲಿ
ಗಿಡಗಳನ್ನು ನೆಟ್ಟು ಆದಷ್ಟು ಬೇಗ ಗುಂಡಿ ಮುಚ್ಚಿ ಎನ್ನುವ ಸಂದೇಶವನ್ನು ಸಂಬಂಧಿಸಿದ
ಇಲಾಖೆಗೆ ಮುಟ್ಟಿಸಿದ್ದಾರೆ.
ಈ ರಸ್ತೆಗೆ ಅನುದಾನ ಬಿಡುಗಡೆಯಾಗಿದೆ. ಆದರೆ ಮಳೆ ಪರಿಸ್ಥಿತಿಯಿಂದ ಕೆಲಸ ಮಾಡಲು
ಸಾಧ್ಯವಿಲ್ಲ. ನಾಳೆ ರಸ್ತೆಯಲ್ಲಿನ ಗುಂಡಿ ಮುಚ್ಚಿಸುವ ಕೆಲಸ ಮಾಡಲಾಗುವುದು ಎಂದು
ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಚೆನ್ನಯ್ಯ ತಿಳಿಸಿದ್ದಾರೆ.