ರೈಲ್ವೆ ಮೇಲ್ಸೇತುವೆ ಸ್ಥಳಾಂತರಿಸಲು ಮನವಿ

Manavi patra
Published on

ಅಳ್ನಾವರ: ಪಟ್ಟಣದ ರೈಲು ನಿಲ್ದಾಣದಲ್ಲಿ ನಿರ್ವಿುಸಲಾಗುತ್ತಿರುವ ರೈಲ್ವೆ ಮೇಲ್ಸೇತುವೆಯನ್ನು ಸ್ಥಳಾಂತರ ಮಾಡಬೇಕು ಎಂದು ತಾಲೂಕಿನ ಉದ್ದಿಮೆದಾರರ ಹಾಗೂ ವರ್ತಕರ ಸಂಘದಿಂದ ಇತ್ತೀಚೆಗೆ ಹುಬ್ಬಳ್ಳಿಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.

ರೈಲ್ವೆ ನಿಲ್ದಾಣದ ಅಭಿವೃದ್ಧಿ ಕೆಲಸವನ್ನು ತ್ವರಿತಗತಿಯಲ್ಲಿ ಕೈಗೊಂಡಿರುವ ಇಲಾಖೆ ಕಾರ್ಯ ಅಭಿನಂದನೀಯ. ಪ್ರಸ್ತುತ ರೈಲ್ವೆ ನಿಲ್ದಾಣದಲ್ಲಿರುವ ಮೇಲ್ಸೇತುವೆ ಸಮೀಪದಲ್ಲಿಯೇ (ಎರಡನೇ ಪಾದಚಾರಿ ಮೇಲ್ಸೇತುವೆ) ಎಕ್ಸಿಲೇಟರ್ ನಿರ್ವಿುಸುತ್ತಿರುವುದು ತಿಳಿದು ಬಂದಿದೆ. ಲೋಂಡಾ ಮಾರ್ಗದಿಂದ ಆಗಮಿಸುವ ಪ್ರಯಾಣಿಕರಿಗೆ ಪಶ್ಚಿಮ ದಿಕ್ಕಿನಲ್ಲಿ ಅನುಕೂಲವಾಗುವಂತೆ ಅದನ್ನು ನಿರ್ವಿುಸಬೇಕು ಎಂದು ಮನವಿ ಮಾಡಲಾಗಿದೆ. ಸಂಘದ ಅಧ್ಯಕ್ಷ ಶ್ರೀಪತಿ ಭಟ್ಟ, ಕರ್ನಾಟಕ ವಾಣಿಜ್ಯ ಸಂಸ್ಥೆ ಮಾಜಿ ಅಧ್ಯಕ್ಷ ಎಂ.ಸಿ. ಹಿರೇಮಠ. ದೇವಜಿ ಪಟೇಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net