ಕಡಲೆ ಕಾಳು ಬಾಕಿ ಹಣ ಪಾವತಿಸಲು ಮನವಿ

2 MDG 4
Published on

ಮುಂಡರಗಿ: ಸಂಜೀವಿನಿ ಒಕ್ಕೂಟದ ಮೂಲಕ ರೈತರಿಂದ ಖರೀದಿಸಿದ ಕಡಲೆ ಕಾಳಿನ ಬಾಕಿ ಹಣ ಪಾವತಿಸಬೇಕು ಎಂದು ತಾಲೂಕಿನ ಹಳ್ಳಿಕೇರಿ ಗ್ರಾಮದ ರೈತರು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಹಳ್ಳಿಕೇರಿ ಗ್ರಾಮದ 62ಕ್ಕೂ ಹೆಚ್ಚು ರೈತರು ಕಳೆದ ವರ್ಷ ಸಂಜೀವಿನಿ ಒಕ್ಕೂಟದ ಮೂಲಕ ಏಜಂಟರೊಬ್ಬರಿಗೆ ಸುಮಾರು 72ಲಕ್ಷ ರೂಪಾಯಿ ಮೌಲ್ಯದ ಕಡಲೆಯನ್ನು ಮಾರಿದ್ದರು. ಅದರಲ್ಲಿ ಈವರೆಗೆ ಕೇವಲ 36 ಲಕ್ಷ ರೂಪಾಯಿ ಹಣ ನೀಡಲಾಗಿದೆ. ಬಾಕಿ ಹಣ ನೀಡುವಂತೆ ಹಲವಾರು ಬಾರಿ ಒತ್ತಾಯಿಸಿದರೂ ಪ್ರಯೋಜನವಾಗುತ್ತಿಲ್ಲ.

ರೈತರು ಸಾಕಷ್ಟು ಸಮಸ್ಯೆಗಳ ನಡುವೆ ಸಾಲ ಮಾಡಿ ಕಡಲೆ ಬೆಳೆದಿದ್ದರು. ಈಗ ಕಡಲೆಯೂ ಇಲ್ಲ, ಹಣವೂ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ವಣವಾಗಿದೆ. ಒಕ್ಕೂಟದ ಧೋರಣೆಯಿಂದಾಗಿ ರೈತರಿಗೆಲ್ಲ ತೊಂದರೆಯಾಗಿದೆ. ಅಧಿಕಾರಿಗಳು ಮಧ್ಯಪ್ರವೇಶಿಸಿ ಬಾಕಿ ಹಣ ಕೊಡಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ, ರೈತರಾದ ನಾಗರಾಜ ಸಜ್ಜನರ, ಶರಣಪ್ಪಗೌಡ ಪಾಟೀಲ, ಮಂಜುನಾಥ ಲಕ್ಕುಂಡಿ, ಬಸವನಗೌಡ ಪಾಟೀಲ, ಶರಣಪ್ಪ ಚನ್ನಳ್ಳಿ, ಗಣೇಶ ಭರಮಕ್ಕನವರ, ದ್ರುವಕುಮಾರ ಹೊಸಮನಿ, ಎಚ್.ವೈ. ಹೊನಕೇರಿ, ಈರಣ್ಣ ಹಂಚಿನಾಳ, ನವೀನ ಕೊಪ್ಪಳ, ಚಂದ್ರಶೇಖರ ಮಾಯಮ್ಮನವರ, ಹಾಲಪ್ಪ ಕೊಟಗಿ, ಮಂಜುನಾಥ ಪಾಟೀಲ, ಹಾಲಪ್ಪ ಹೊನಕೇರಿ, ಸುರೇಶ ಪಾಟೀಲ, ಗವಿಸಿದ್ದಯ್ಯ ಹಿರೇಮಠ, ಬಿ.ಬಿ. ಕವಲೂರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net