ಇಳಂತಿಲ ಗ್ರಾಪಂ ಅಧ್ಯಕ್ಷರ ವಿರುದ್ಧ ಕಾನೂನು ಕ್ರಮಕ್ಕೆ ಮನವಿ

Published on

ಉಪ್ಪಿನಂಗಡಿ: ಇಳಂತಿಲ ಗ್ರಾಪಂ ಅಧ್ಯಕ್ಷ ತಿಮ್ಮಪ್ಪ ಗೌಡ ಅವರು ಗ್ರಾಮದ ಅಭಿವೃದ್ಧಿ ಕೆಲಸ ಕಾರ್ಯಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಗ್ರಾಪಂ ಹಿತವನ್ನು ಧಿಕ್ಕರಿಸಿ ಮನಸೋ ಇಚ್ಛೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಅಧ್ಯಕ್ಷರ ವಿರುದ್ಧ 9ಮಂದಿ ಗ್ರಾಪಂ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿ ಕಾನೂನು ಕ್ರಮಕ್ಕೆ ಸಹಾಯಕ ಆಯುಕ್ತರಿಗೆ ಫೆ. 20ರಂದು ಮನವಿ ಸಲ್ಲಿಸಿದ್ದಾರೆ.

ವಸಂತ ಕುಮಾರ್, ವಿಜಯ ಕುಮಾರ್, ಚಂದ್ರಿಕಾ ಭಟ್, ಉಷಾ ಯು, ಸುಪ್ರೀತ್, ಸಿದ್ಧೀಕ್, ಯು.ಕೆ.ಇಸುಬು, ಕುಸುಮಾ, ನುಸ್ರುತ್ ಸೇರಿದಂತೆ 9 ಮಂದಿ ಗ್ರಾಪಂ ಸದಸ್ಯರು ಹೆಸರು, ಸಹಿಯೊಂದಿಗೆ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net