ಮಾಸಿಕ ಗೌರವ ಧನ ಹೆಚ್ಚಳಕ್ಕೆ ಮನವಿ

CLK MANAVI 28
Published on

ಚಳ್ಳಕೆರೆ: ಮಾಸಿಕ ಗೌರವ ಧನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ನಗರದಲ್ಲಿ ಬುಧವಾರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಸೇವಾ ಭದ್ರತೆ ನೀಡಬೇಕು. ವಾರದಲ್ಲಿ 10 ಗಂಟೆ ಮಾತ್ರ ಸೇವೆ ಸಲ್ಲಿಸಲು ನಿಯಮವಿದ್ದರೂ 20 ಗಂಟೆಗಳ ಕಾಲ ದುಡಿಸಿಕೊಳ್ಳಲಾಗುತ್ತಿದೆ. ಇಂತಹ ಶೋಷಣೆ ನಿಲ್ಲಬೇಕು.

ಸರ್ಕಾರಿ ರಜೆಯಾಗಿ ಜಾರಿಯಾಗುವ ಹಬ್ಬಗಳ ದಿನಗಳನ್ನು ಪರಿಗಣಿಸಿ ಗೌರವಧನ ನೀಡಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮಣ್, ಇಮ್ರಾನ್, ಮಧು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net