ಬರಪೀಡಿತ ಪಟ್ಟಿಗೆ ಸೇರಿಸಲು ಮನವಿ

manavi
Published on

ಮುಂಡರಗಿ: ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಎಸ್‌ಪಿ ಹಾಗೂ ಎಎಪಿ ಕಾರ್ಯಕರ್ತರು ಸೋಮವಾರ ಬೆಂಗಳೂರು ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಭವನದ ಮುಖ್ಯಕಾರ್ಯದರ್ಶಿ ಅರುಣ ಪೊಟಡಿಯಾ ಅವರಿಗೆ ಮನವಿ ಸಲ್ಲಿಸಿದರು.

ಬಿಎಸ್‌ಪಿ ಜಿಲ್ಲಾ ಸಂಯೋಜಕ ಬಸವರಾಜ ನವಲಗುಂದ ಮಾತನಾಡಿ, ಸರ್ಕಾರ ನೀರಾವರಿ ಮತ್ತು ಒಣಬೇಸಾಯ ಪ್ರದೇಶಗಳನ್ನು ಸರಿಯಾಗಿ ಅಧ್ಯಯನ ಮಾಡದೇ ಬರಪೀಡಿತ ತಾಲೂಕುಗಳ ಘೋಷಣೆ ಮಾಡಿರುವುದರಿಂದ ಹಲವಾರು ತಾಲೂಕುಗಳು ವಂಚಿತವಾಗಿವೆ. ಮುಂಡರಗಿ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದರು.

ಡಿ.ಎಸ್. ಕಟ್ಟಿಮನಿ, ಸುಭಾಷ ಕುಂಬಾರ, ಮಂಜುನಾಥ ಹುಬ್ಬಳ್ಳಿ, ರಮೇಶ ರಾಮೇನಳ್ಳಿ, ಗುಡದಪ್ಪ ತಳಿಗೇರಿ, ಹನುಮಂತ ಮಾದರ, ಕುಮಾರ ಬಿ, ಅಭಿನಯ ಕುದುರಿ, ನಾಗರಾಜ ಹರಿಜನ, ಅರುಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net