ಕೃತಕ ಗುಡ್ಡ ತೆರವಿಗೆ ಮನವಿ

JYD MANAVI
Published on

ಅಂಕೋಲಾ: ತಾಲೂಕಿನ ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ನಿರ್ಮಾಣಗೊಂಡ ಕೃತಕ ಗುಡ್ಡವನ್ನು ತೆರವುಗೊಳಿಸಬೇಕು ಎಂದು ಬಿಜೆಪಿ ವತಿಯಿಂದ ತಹಸೀಲ್ದಾರ್ ಅನಂತ ಶಂಕರ ಬಿ. ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ನದಿಯಲ್ಲಿ ಕೃತಕ ಗುಡ್ಡ ನಿರ್ಮಾಣದಿಂದ ಹಲವಾರು ಗ್ರಾಮಗಳಿಗೆ ನೆರೆ ಭೀತಿ ಎದುರಾಗಿದೆ. ಅಲ್ಲದೆ, ಗುಡ್ಡದ ಮಣ್ಣನ್ನು ನದಿಯಿಂದ ತೆರೆವುಗೊಳಿಸದಿದ್ದರೆ ಸಾವಿರಾರು ಹೆಕ್ಟರ್ ಭತ್ತದ ಗದ್ದೆಗಳು ನಾಶವಾಗುವ ಸಂಭವವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಬಿಜೆಪಿ ಪ್ರಮುಖರಾದ ಭಾಸ್ಕರ ಕೆ. ನಾವೇಕರ್, ರಾಮಚಂದ್ರ ಹೆಗಡೆ, ಸದಾನಂದ ನಾಯಕ ಸುಂಕಸಾಳ, ಗೋಪಾಲಕೃಷ್ಣ ವೈದ್ಯ, ನಿತ್ಯಾನಂದ ಗಾಂವಕರ, ವಿ.ಎಸ್. ಭಟ್ಟ, ಚಂದ್ರಕಾಂತ ನಾಯ್ಕ ಬೊಬ್ರುವಾಡ, ಆರತಿ ಗೌಡ, ದಾಮು ರಾಯ್ಕರ್, ಎಂ.ಎನ್. ಭಟ್ಟ, ನಾರಾಯಣ ಹೆಗಡೆ, ಮಹೇಶ ನಾಯಕ, ಈಶ್ವರ ಗೌಡ, ಪ್ರವೀಣ ನಾಯ್ಕ, ಸಂದೀಪ ಗಾಂವಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net