

ಲಕ್ಷ್ಮೇಶ್ವರ: ಪಟ್ಟಣದ ಸವಣೂರು ರಸ್ತೆಯ ಶ್ರೀ ಸುಬ್ರಮಣ್ಯ ದೇವಸ್ಥಾನದ ಹತ್ತಿರವಿರುವ ಉಪನಾಳ ಪಾರ್ಕ್ ಬಡಾವಣೆಯು ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ರಸ್ತೆ, ಚರಂಡಿಗಳಿಲ್ಲದೆ ನಿವಾಸಿಗಳು ಪರದಾಡುವಂತಾಗಿದೆ. ಈ ಬಡಾವಣೆಯ ರಸ್ತೆಗಳನ್ನು ಅಭಿವೃದ್ಧಿಗೊಳಿಸುವಂತೆ ನಿವಾಸಿಗಳು ಸೋಮವಾರ ಪುರಸಭೆ ಅಧ್ಯಕ್ಷರಿಗೆ ಮನವಿ ಅರ್ಪಿಸಿದರು. ಬಡಾವಣೆಯಲ್ಲಿ ಹಲವಾರು ವರ್ಷಗಳಿಂದ ರಸ್ತೆ, ಬೀದಿದೀಪ, ಚರಂಡಿ ಸೇರಿ ಯಾವುದೇ ಸೌಲಭ್ಯಗಳು ದೊರೆಯದೆ ನಿವಾಸಿಗಳು ಪರದಾಡುತ್ತಿದ್ದಾರೆ. ಪುರಸಭೆಯಿಂದ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ, ಕೂಡಲೇ ಬಡಾವಣೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಉಪನಾಳ ಪಾರ್ಕ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ರಸ್ತೆ ಕಾಮಗಾರಿ ಬೇರೆ ಕಡೆ ಸ್ಥಳಾಂತರಿಸುವ ಬಗ್ಗೆ ಗಮನಕ್ಕೆ ಬಂದಿದ್ದು, ಯಾವುದೇ ಕಾರಣಕ್ಕೂ ಸ್ಥಳಾಂತರಿಸದೆ ಉಪನಾಳ ಪಾರ್ಕ್ ಅಭಿವೃದ್ಧಿಗೆ ವಿನಿಯೋಗಿಸಬೇಕು ಎಂದು ಮನವಿ ಮಾಡಿದರು. ಅಧ್ಯಕ್ಷ, ಉಪಾಧ್ಯಕ್ಷರು ಸೂಕ್ತ ನಿರ್ಣಯ ಕೈಗೊಳ್ಳುವ ಭರವಸೆ ನೀಡಿದರು. ಎಸ್.ಡಿ. ತಿರಕಪ್ಪನವರ, ಆರ್.ಎಫ್. ರಿತ್ತಿ, ಜೆ.ವಿ. ಅರಳಿಕಟ್ಟಿ, ಎ.ಎಸ್. ರಾಯಣ್ಣವರ, ಜಿ.ಜಿ. ಹುರಕನವರ, ಎಸ್.ಆರ್. ರಿತ್ತಿ, ಆರ್.ಇ.ಬಾಕಳೆ, ಆರ್.ಡಿ. ನಾಯಕ್, ಎಂ.ಡಿ. ಹುಬ್ಬಳ್ಳಿ, ಎಂ.ಬಿ. ಸಂಗನಪೇಟ, ಕೆ.ಬಿ. ಘಂಟಿ, ಬಸಪ್ಪ ಕುರಿ, ಎನ್.ಡಿ. ಸೂರಣಗಿ, ಮಲ್ಲಿಕಾರ್ಜುನ, ಅಶೋಕ ಕಲ್ಲಣ್ಣವರ, ಎಂ.ಎಸ್. ಮಳಿಮಠ, ಪಿ.ಪಿ. ಚಲುವಾದಿ, ಬಿ.ಎಫ್. ಶಿರೂರ, ಇತರರಿದ್ದರು.