

ಹಿರೇಕೆರೂರ: ಪದವಿ ವಿದ್ಯಾರ್ಥಿಗಳ ಬಸ್‌ಪಾಸ್ ಅವಧಿ ವಿಸ್ತರಣೆಗೆ ಅವಕಾಶ ನೀಡದಿರುವುದನ್ನು ವಿರೋಧಿಸಿ ತಾಲೂಕು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪಟ್ಟಣದ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಮಂಜುನಾಥ ಹಡಪದ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ತಾಲೂಕು ಎಬಿವಿಪಿ ನಗರ ಕಾರ್ಯದರ್ಶಿ ಹರೀಶ ಡಿ.ಬಿ., ಮಾತನಾಡಿ, ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಬಸ್‌ಪಾಸ್ ಅವಧಿ ವಿಸ್ತರಣೆಗೆ ಅವಕಾಶ ನೀಡಬೇಕು ಹಾಗೂ ಬಸ್ ಪಾಸ್ ಅವಧಿ ವಿಸ್ತರಣೆಗೆ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ 110 ಹಾಗೂ ಸಾಮಾನ್ಯ ವಿದ್ಯಾರ್ಥಿಗಳಿಗೆ 290 ರೂ. ಪಡೆಯುತ್ತಿರುವುದು ಸರಿಯಲ್ಲ, ವಿಶ್ವವಿದ್ಯಾಲಯ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿರುವುದರಿಂದ ಇನ್ನೂ ಎರಡು ತಿಂಗಳು ಕಲಿಕಾ ಅವಧಿ ವಿಸ್ತರಣೆಯಾಗಿದೆ. ಯಾವುದೇ ಶುಲ್ಕ ವಿಧಿಸದೇ ಬಸ್‌ಪಾಸ್ ಅವಧಿಯನ್ನು ವಿಸ್ತರಿಸಿಕೊಡಬೇಕು ಎಂದು ಆಗ್ರಹಿಸಿದರು.
ಶಿವಕುಮಾರ ಮಾಸಣಗಿ, ವಿನಯ್ ಕಾಲ್ವಿಹಳ್ಳಿ, ಲಿಂಗರಾಜ ನಾಯ್ಕ, ದರ್ಶನ್ ಲಮಾಣಿ, ಅರ್ಜುನ್ ನಾಯ್ಕ, ದೇವರಾಜ ಆಲದಕಟ್ಟಿ, ಅನೀಲ ಬಿದರಿ, ಮಂಜುನಾಥ ಕೋಡಿಹಳ್ಳಿ, ಮಂಜುನಾಥ ಕೊಪ್ಪದ, ಭರತ್ ತಳವಾರ, ರಜತ್ ಲಮಾಣಿ, ಪ್ರಮೋದ ಆರ್.ವೈ., ರಂಗನಾಥ ಸಂಚೀವ ಪೂಜಾರ