ಮಂಡ್ಯ ನಗರದ ಉದ್ಯಾನಗಳ ಅಭಿವೃದ್ಧಿಪಡಿಸಿ: ಡಿಸಿಗೆ ಕನ್ನಡಸೇನೆ ಸಂಘಟನೆ ಮನವಿ

2 (1)
Published on

ಮಂಡ್ಯ: ನಗರದ ಉದ್ಯಾನಗಳ ಅಭಿವೃದ್ಧಿ ಹಾಗೂ ದುರಸ್ತಿಯಲ್ಲಿರುವ ವ್ಯಾಯಾಮ ಉಪಕರಣಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಕನ್ನಡ ಸೇನೆ ಸಂಘಟನೆಯಿಂದ ಸೋಮವಾರ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಮಂಡ್ಯ ನಗರದಲ್ಲಿ 35ಕ್ಕೂ ಹೆಚ್ಚು ಉದ್ಯಾನಗಳು ಇವೆ. ಆದರೆ ಬಹುತೇಕ ಮೂಲ ಸೌಕರ್ಯವಿಲ್ಲದೆ ವಂಚಿತವಾಗಿವೆ. ಉದ್ಯಾನಗಳಲ್ಲಿ ಎಲ್ಲ ವರ್ಗದ ಜನರು ವಿಹಾರ ಮಾಡುತ್ತಾರೆ. ಅವರ ಆರೋಗ್ಯದ ದೃಷ್ಟಿಯನ್ನಿಟ್ಟುಕೊಂಡು ರಾಜ್ಯ ಸರ್ಕಾರ ಕೆಲ ವರ್ಷದ ಹಿಂದೆ 15ಕ್ಕೂ ಹೆಚ್ಚು ಉದ್ಯಾನಗಳಲ್ಲಿ ಎಲ್ಲ ವಯಸ್ಸಿನ ಜನರ ಆರೋಗ್ಯಕ್ಕಾಗಿ ವ್ಯಾಯಾಮ ಉಪಕರಣಗಳನ್ನು ಅಳವಡಿಸಿದ್ದಾರೆ. ಇದರಲ್ಲಿ ಬೋರೇಗೌಡ ಉದ್ಯಾನ, ಸುಶೀಲಮ್ಮ ಉದ್ಯಾನ, ಶಿವನಂಜಪ್ಪ ಉದ್ಯಾನ, ಆನೆ ಪಾರ್ಕ್ ಸೇರಿದಂತೆ 10ಕ್ಕೂ ಹೆಚ್ಚು ಉದ್ಯಾನಗಳಲ್ಲಿ ಈಗಾಗಲೇ ಅಳವಡಿಸಿರುವ ಉಪಕರಣಗಳು ಮುರಿದು, ತುಕ್ಕು ಹಿಡಿದು ಕಳೆದ 2 ವರ್ಷಗಳಿಂದ ದುರಸ್ತಿಯಲ್ಲಿವೆ. ವಿಹಾರ ಮಾಡುವ ಜನರು ಬಹಳಷ್ಟು ಬಾರಿ ನಗರಸಭೆ ಅಧ್ಯಕ್ಷರು ಮತ್ತು ಆಯುಕ್ತರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಉದ್ಯಾನಗಳಿಗೆ ಕುಡಿಯುವ ನೀರಿನ ಹಾಗೂ ಶೌಚಾಗೃಹ, ಸಸಿಗಳ ನೆಡುವಿಕೆ ಇನ್ನು ಮುಂತಾದ ಮೂಲ ಸೌಕರ್ಯಗಳನ್ನು ಜಿಲ್ಲಾಡಳಿತ ಜನರ ಆರೋಗ್ಯಕ್ಕಾಗಿ ಆಳವಡಿಸಿರುವ ಉಪಕರಣಗಳನ್ನು ಸರಿಪಡಿಸಬೇಕು. ಇನ್ನು 15 ದಿನದೊಳಗೆ ಸರಿಪಡಿಸದಿದ್ದರೆ ಮಂಡ್ಯ ನಗರದ ಜನರ ಜತೆಗೂಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧ್ಯಕ್ಷ ಮಂಜುನಾಥ್, ರಾಜೇಗೌಡ, ಕೃಷ್ಣೇಗೌಡ, ಸುಬ್ಬೇಗೌಡ, ಮಹಾದೇವ, ಮರಿಸ್ವಾಮಿ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net