ಬರಪೀಡಿತ ತಾಲೂಕು ಘೋಷಣೆಗೆ ಮನವಿ

SRT STRIKE
Published on

ಶಿರಹಟ್ಟಿ: ಬರಪೀಡಿತ ತಾಲೂಕು ಘೋಷಣೆ, ಬೆಳೆ ನಷ್ಟ ಪರಿಹಾರ ಮತ್ತಿತರ ಬೇಡಿಕೆ ಈಡೇರಿಸಬೇಕು ಎಂದು ತಾಲೂಕಿನ ವಿವಿಧ ಗ್ರಾಮಗಳ ರೈತರು ತಹಸೀಲ್ದಾರ್ ಮೂಲಕ ಸಿಎಂ ಹಾಗೂ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದರು.

ರೈತರಾದ ಶಿವು ಕಲ್ಯಾಣಿ, ಸಂತೋಷ ಕುರಿ, ರವಿ ಹಳ್ಳಿ ಮಾತನಾಡಿ, ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯದ 120 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ ಶಿರಹಟ್ಟಿ ತಾಲೂಕನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸತ್ಯಾಸತ್ಯತೆ ಅರಿತು ಮುಖ್ಯಮಂತ್ರಿ ಗಮನ ಸೆಳೆದು ಶಿರಹಟ್ಟಿಯನ್ನು ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದರು.

ಬೆಳೆ ನಷ್ಟ ಪರಿಹಾರ, ಮಧ್ಯಂತರ ಬೆಳೆ ವಿಮೆ, ಬ್ಯಾಂಕು, ಸಹಕಾರಿ ಸಂಘಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು, ದಿನಕ್ಕೆ 7 ತಾಸು ತ್ರೀಫೇಸ್ ವಿದ್ಯುತ್ ಸರಬರಾಜು ಮಾಡಬೇಕು ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಗ್ರೇಡ್-2 ತಹಸೀಲ್ದಾರ್ ಎನ್.ಎಚ್. ಭಜಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಚಂದ್ರು ಹಮ್ಮಿಗಿ, ಬಸವಣ್ಣೆಪ್ಪ ತುಳಿ, ಚಂದ್ರು ತಳವಾರ, ಪಪಂ ಸದಸ್ಯ ಫಕೀರೇಶ ರಟ್ಟಿಹಳ್ಳಿ, ನೀಲಪ್ಪ ತುಳಿ, ಶ್ರೀಕಾಂತ ಹಾದಿಮನಿ, ಯಲ್ಲಪ್ಪ ಕುರಿ, ಚೆನ್ನವೀರಪ್ಪ ಕಲ್ಯಾಣಿ, ಎನ್.ವೈ. ಹುಬ್ಬಳ್ಳಿ, ಪರಶುರಾಮ ಡೊಂಕಬಳ್ಳಿ, ಮಹಾದೇವಪ್ಪ ವರವಿ, ಫಕೀರಪ್ಪ ತುಳಿ, ಎಂ.ಡಿ. ವರವಿ, ಎಸ್.ಎಚ್. ವರವಿ, ಬಸಪ್ಪ ವಡ್ಡರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net