

ರೋಣ: ಅಸಂಘಟಿತ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಭವನ ಹಾಗೂ ಸಮುದಾಯ ಭವನ ನಿರ್ಮಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ವೇದಿಕೆಯ ಸ್ವಾಭಿಮಾನಿ ಬಣದ ತಾಲೂಕಾಧ್ಯಕ್ಷ ಬಸವರಾಜ ಕುರಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಸಂಘಟಿತ ಕಾರ್ಮಿಕರಿಗೆ ಇಎಸ್‌ಐ ಸೌಲಭ್ಯ ನೀಡಬೇಕು. ಕಾರ್ಮಿಕರ ಮಕ್ಕಳ ಆರೋಗ್ಯ, ಶಿಕ್ಷಣಕ್ಕಾಗಿ ಪ್ರತ್ಯೇಕ ನಿಧಿ ಸ್ಥಾಪಿಸಬೇಕು ಎಂದರು. ಹನುಮಂತ ಕುರಿ, ಮಂಜುನಾಥ ಪೂಜಾರ, ಸುಲೇಮಾನ ಇಟಗಿ, ಬುಡ್ನೇಸಾಬ್ ಚಿನ್ನೂರು, ದಾವಲಸಾಬ್ ಕೋಲ್ಕಾರ, ರಫಿಕ್ ಬಾಡಿನ, ವೀರೇಶ ಕಲಹಾಳ, ವಿಷ್ಣು ಕಮ್ಮಾರ, ವೀರಪ್ಪ ಮಾದರ, ಹನುಮಂತ ವಾಲಿಕಾರ, ಶೋಭಾ ರಾಮಣ್ಣವರ, ಸವಿತಾ ಮೆಣಸಗಿ, ಬಾಳಪ್ಪ ಭಜಂತ್ರಿ, ವೀರೇಶ ಹೂಗಾರ, ಬಸವರಾಜ ಕಿರಟಗೇರಿ, ಮಮ್ತಾಜ್‌ಬಿ ರೋಣದ, ಮಮ್ತಾಜ್‌ಬಿ ಹುಸೇನಬಾವಿ, ಇತರರಿದ್ದರು.