ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಮನವಿ

manavi
ರಸ್ತೆಯ ಕಾಮಗಾರಿ ಪೂರ್ಣಗೊಳಿಸಬೇಕೆಂದು ಫಲಾನುಭವಿಗಳು ನ.ಪಂ.ಮುಖ್ಯಾಧಿಕಾರಿ ಸುಧಾಕರ ಅವರಿಗೆ ಮನವಿ ಸಲ್ಲಿಸಿದರು.
Published on

ಸುಳ್ಯ: ನಗರದ ಕೆಸ್ಸಾರ್ಟಿಸಿ ಬಸ್ ನಿಲ್ದಾಣದ ಮುಂಭಾಗದಿಂದ ಹಾದುಹೋಗಿ ಸಂತೋಷ್ ಚಿತ್ರಮಂದಿರ ಬಳಿ ಸೇರುವ ರಸ್ತೆಯ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ಆ ರಸ್ತೆಯ ಫಲಾನುಭವಿಗಳು ಬುಧವಾರ ನ.ಪಂ ಮುಖ್ಯಾಧಿಕಾರಿ ಸುಧಾಕರ ಅವರಿಗೆ ಮನವಿ ಸಲ್ಲಿಸಿದರು.

ಸುಳ್ಯದ ಹೃದಯಭಾಗ ಹಾದುಹೋಗಿ ಸಂತೋಷ್ ಥಿಯೇಟರ್ ಬಳಿ ಸೇರಿಕೊಳ್ಳುವ ನಾವೂರು ರಸ್ತೆ ಸುಮಾರು 1.5 ಕಿ.ಮೀ. ಉದ್ದವಿದ್ದು ಈ ಪೈಕಿ ಬಹುತೇಕ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದರೂ ಸುಳ್ಯ ಬಸ್‌ನಿಲ್ದಾಣದ ಎದುರುಗಡೆ 80 ಮೀಟರ್ ರಸ್ತೆಯು ಕಾಮಗಾರಿ ಬಾಕಿ ಉಳಿದಿದೆ. ಆ ಭಾಗದ ರಸ್ತೆಯು ಮಳೆನೀರು ಹರಿದು ಹೊಂಡಗುಂಡಿಗಳಿಂದ ಕೂಡಿದು, ಈ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಬಹಳ ಕಷ್ಟಕರವಾಗಿದೆ. ಹೀಗಾಗಿ ಆದಷ್ಟು ಶೀಘ್ರ ಬಾಕಿ ಇರುವ ರಸ್ತೆಯ ಕಾಮಗಾರಿ ಪೂರ್ಣಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಇಬ್ರಾಹಿಂ ಬಿಗ್4 ಟೈಲ್ಸ್, ನಿವೃತ್ತ ಎ.ಎಸ್.ಐ.ಚಂದಪ್ಪ ಗೌಡ ಹಾಗೂ ಚಂದ್ರಶೇಖರ ಚೋಡಿಪಣೆ ಜೊತೆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net