ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಮನವಿ

Ayyappa
Published on

ಶಿರಹಟ್ಟಿ: ಹುಬ್ಬಳ್ಳಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೃತಪಟ್ಟ ಅಯ್ಯಪ್ಪ ಮಾಲಾಧಾರಿಗಳ ಕುಟುಂಬಕ್ಕೆ ರಾಜ್ಯ ಸರ್ಕಾರ ತಕ್ಷಣ ಪರಿಹಾರ ನೀಡಬೇಕು ಎಂದು ಶಿರಹಟ್ಟಿಯ ಶ್ರೀ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಭಕ್ತವೃಂದದಿಂದ ತಹಸೀಲ್ದಾರ್ ಎಸ್. ಆಸ್ಕಿ ಅವರ ಮೂಲಕ ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಅಯಪ್ಪ ಮಾಲಾಧಾರಿ ಸಂತೋಷ ಕುರಿ ಮಾತನಾಡಿ, ಮೃತಪಟ್ಟ ಸ್ವಾಮಿಗಳ ಕುಟುಂಬಗಳು ಬಡತನದಿಂದ ಕೂಡಿದ್ದು, ಸರ್ಕಾರ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಹನುಮಂತ ಪವಾರ, ಚಂದ್ರು ಜೋಗೇರ, ಪ್ರವೀಣ ಗಂಟಿ, ಮನೋಜ ಭಜಂತ್ರಿ, ಮಲ್ಲಪ್ಪ ಕುದರಿ, ಆನಂದ ಗಂಟಿ, ಗೌಡಪ್ಪ ಪಾಟೀಲ, ಮಂಜು ಕಲಾಲ, ಪ್ರಶಾಂತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net