ಬಸ್ ಸಂಪರ್ಕ ಕಲ್ಪಿಸಲು ಒತ್ತಾಯಿಸಿ ಮನವಿ

BUS
ರೋಣ ತಾಲ್ಲೂಕಿನ ಬಳಗೋಡ ಗ್ರಾಮಕ್ಕೆ ಬಸ್ ಸಂಪರ್ಕ ಕಲ್ಪಿಸಲು ಒತ್ತಾಯಿಸಿ ಗ್ರಾಮಸ್ಥರು ಮತ್ತು ಗ್ರಾಮದ ವಿದ್ಯಾರ್ಥಿಗಳಿಂದ ರೋಣ ತಹಶೀಲ್ದಾರಗೆ ಮನವಿ ಸಲ್ಲಿಸುತ್ತಿರುವುದು.
Published on

ರೋಣ : ತಾಲ್ಲೂಕಿನ ಬಳಗೋಡ ಗ್ರಾಮಕ್ಕೆ ಬಸ್ ಸಂಪರ್ಕ ಕಲ್ಪಿಸಲು ಒತ್ತಾಯಿಸಿ ಗ್ರಾಮಸ್ಥರು ಮತ್ತು ಗ್ರಾಮದ ವಿದ್ಯಾರ್ಥಿಗಳಿಂದ ರೋಣ ತಹಶೀಲ್ದಾರಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಗ್ರಾಮದ ಮುಖಂಡ ಶರಣಪ್ಪ ಪ್ಯಾಟಿ ಬಳಗೋಡ ಗ್ರಾಮದಿಂದ ಪ್ರತಿನಿತ್ಯ ಹಲವಾರು ವಿದ್ಯಾರ್ಥಿಗಳು ರೋಣ ಮತ್ತು ಬದಾಮಿ ನಗರದ ಹಲವು ಶೈಕ್ಷಣಿಕ ಕೇಂದ್ರಗಳಿಗೆ ವಿದ್ಯಾಭ್ಯಾಸಕ್ಕೆ ತೆರಳುತ್ತಿದ್ದು ಗ್ರಾಮಕ್ಕೆ ಬಸ್ ಸಂಪರ್ಕವಿಲ್ಲದ ಕಾರಣ ಹಿರೇಹಾಳದವರೆಗೆ ನಡೆದುಕೊಂಡೆ ಹೋಗಿ ಬರಬೇಕಾದ ಪರಿಸ್ಥಿತಿ ಇದ್ದು ಗ್ರಾಮಸ್ಥರಿಗೂ ಕೂಡ ಬಸ್ ಸಂಪರ್ಕವಿಲ್ಲದ ಕಾರಣ ಸಾಕಷ್ಟು ತೊಂದರೆಯಾಗಿದ್ದು ಅನಿಶ್ಚಿತವಾದ ಖಾಸಗಿ ವಾಹನಗಳನ್ನೇ ಸಂಚಾರಕ್ಕಾಗಿ ಅವಲಂಬಿಸಬೇಕಾದ ಪರಿಸ್ಥಿತಿ ಇದ್ದು ಗ್ರಾಮಕ್ಕೆ ಕೂಡಲೇ ಬಸ್ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ರೇಖಾ ಪ್ಯಾಟಿ ಮಲ್ಲಮ್ಮ ಗಣಾಚಾರಿ ಕರಿಯಪ್ಪ ಕೊಡತಗೇರಿ,ಉಮೇಶ ತುಪ್ಪದ,ಜಗದಯ್ಯ ಗಣಾಚಾರಿ,ರಮೇಶ ವಕ್ಕರ,ಅಂದಾನಗೌಡ ಪಾಟೀಲ,ಶಿವಪ್ಪ ಹುಲ್ಲನ್ನವರ,ಮುತ್ತಪ್ಪ ಚಿಗೂಳ್ಳಿ,ಶರಣಪ್ಪ ಗುದ್ನೆಣ್ಣವರ,ಹೂವಪ್ಪ ತುಪ್ಪದ,ಪಕೀರಯ್ಯ ಗಣಾಚಾರಿ, ಕುಬೇರಪ್ಪ ಪ್ಯಾಟಿ,ಮಹಾಂತೇಶ ಗಂಟಿ ವಿದ್ಯಾರ್ಥಿಗಳಾದ ಕಿರಣ ಬೇವಿನಗಿಡದ,ಲಿಂಗರಾಜ ಗೋಸಲ,ಅಶೋಕ ಗೋಸಲ,ಶಿವು ಗುದ್ನೆಣ್ಣವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net