

ವಿಜಯವಾಣಿ ಸುದ್ದಿಜಾಲ ಧಾರವಾಡ
ಬೆಳೆ ಹಾನಿ, ಬೆಳೆ ಪರಿಹಾರ ಜಮೆ ಆಗದಿರುವ ರೈತರು ಖಾತೆ ಹೊಂದಿರುವ ಬ್ಯಾಂಕ್ಗೆ ಭೇಟಿ ನೀಡಿ, ಖಾತೆ ಚಾಲ್ತಿ ಇರುವ ಬಗ್ಗೆ, ಕೆವೈಸಿ ಅಪಡೇಟ್ ಮತ್ತು ಪ್ರೂಟ್ಸ್ ಸಂಖ್ಯೆ ಹೊಂದಿರುವ ಬಗ್ಗೆ ಪರಿಶೀಲಿಸಿ ಖಾತರಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಕೌಂಟ್ಗಳನ್ನು ನಿರ್ಬಂಧಿ-ಸಿರುವುದು ಅಥವಾ ಫ್ರೀಜ್, ಖಾತೆ ಬಂದಾಗಿರುವ ಲಾನುಭವಿಗಳು ಬ್ಯಾಂಕ್ಗೆ ತೆರಳಿ ಮತ್ತೆ ಖಾತೆ ಆರಂಭಿಸಬೇಕು. ್ರೂಟ್ಸ್ ಅಪ್ಡೇಟ್ನಲ್ಲಿ ಆಧಾರ್ ಹೆಸರು ಹೊಂದಿಕೆಯಾಗುತ್ತಿಲ್ಲ. ಆ ರೈತರು ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ಅಪ್ಡೇಟ್ ಮಾಡಿಸಬೇಕು. ಆಧಾರ್ ಅನ್ನು ಬ್ಯಾಂಕ್ನೊಂದಿಗೆ ಸೀಡ್, ಖಾತೆಗೆ ಆಧಾರ್ ಮ್ಯಾಪ್ ಹಾಗೂ ಎನ್ಪಿಸಿಐ ಸೀಡಿಂಗ್ ಸಮಸ್ಯೆ ಇರುವ ಲಾನುಭವಿಗಳು ಬ್ಯಾಂಕ್ಗೆ ಹೋಗಿ ಎನ್ಪಿಸಿಐ ಮಾಡಿಸಬೇಕು. ಹೆಚ್ಚಿನ ವಿವರ, ಮಾಹಿತಿ ಅಗತ್ಯವಿದ್ದಲ್ಲಿ ಆಯಾ ತಾಲೂಕಿನ ತಹಸೀಲ್ದಾರ ಕಚೇರಿಯಲ್ಲಿ ತೆರೆದಿರುವ ಬರಪರಿಹಾರ ಕೇಂದ್ರ ಅಥವಾ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.