

ದೇವನಹಳ್ಳಿ: ಕೆಲವು ರಾಜಕೀಯ ನಾಯಕರು ಕಂದಾಯ ಅಧಿಕಾರಿಗಳಿಗೆ ಕರೆ ಮಾಡಿ ರಾಯಸಂದ್ರಧ ಸರ್ಕಾರಿ ಗೋಮಾಳ ಜಾಗದಲ್ಲಿ ಸರ್ವೇ ಕಾರ್ಯ ನಡೆಸಬಾರದು ಎಂದು ಒತ್ತಡ ಹಾಕುತ್ತಿದ್ದಾರೆ ಎಂದು ದಲಿತ ಮುಖಂಡ ಸೋಮಣ್ಣ ಗ್ರಾಮಸ್ಥರ ಜತೆಗೂಡಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಕೆಲವು ರಾಜಕೀಯ ಪ್ರಭಾವ ಬಳಸಿ ಸರ್ಕಾರಿ ಗೋಮಾಳ ಜಾಗದಲ್ಲಿ ಉಳಿಕೆ ಇರುವ ಸರ್ಕಾರಿ ಜಾಗ ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ, ಇದೇ ರೀತಿ ಷಡ್ಯಂತ್ರಗಳು ಮುಂದುವರೆದರೆ ಮುಂದಿನ ದಿನಗಳಲ್ಲಿ ರಾಯಸಂದ್ರದ ಗ್ರಾಮದ ಜನತೆ ಮತ್ತು ದಲಿತ ಪರ ಒಕ್ಕೂಟಗಳು ಒಗ್ಗಟ್ಟಾಗಿ ಉಗ್ರ ಹೋರಾಟ ಮಾಡಬೇಕಾಗುತ್ತೆ ಎಂದು ತಿಳಿಸಿದರು.