ಸಮರ್ಪಕ ನೀರು ಪೂರೈಸಲು ಪಟ್ಟು

Dbpp1
ಸಮರ್ಪಕವಾಗಿ ನೀರು ಪೂರೈಸುವಂತೆ ದೊಡ್ಡಬಳ್ಳಾಪುರ ನಗರಸಭೆ ಪೌರಾಯುಕ್ತ ಪರಮೇಶ್ ಅವರಿಗೆ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ಮುಖಂಡರಾದ ವಸಂತ್ ಕುಮಾರ್, ಸತೀಶ್, ಮಂಜುನಾಥ, ಶ್ರೀರಾಮ್ ಇದ್ದರು.
Published on

*ದೊಡ್ಡಬಳ್ಳಾಪುರ ನಗರಸಭೆ ಪೌರಾಯುಕ್ತ ಪರಮೇಶ್‌ಗೆ ಮನವಿ

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಯ ಅಂತರ್ಜಲ ಕಲುಷಿತಗೊಂಡಿದ್ದು, ಎರಡೂ ಗ್ರಾಮ ಪಂಚಾಯಿತಿಗಳ ಗ್ರಾಮಗಳಿಗೆ ಜಕ್ಕಲಮಡು ಜಲಾಶಯದಿಂದ ನೀರು ಪೂರೈಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಆದೇಶಿಸಿದ್ದಾರೆ, ಹೀಗಾಗಿ ಎಲ್ಲ ಗ್ರಾಮಗಳಿಗೂ ಜಕ್ಕಲಮಡು ನೀರು ಪೂರೈಸುವಂತೆ ಅರ್ಕಾವತಿ ನದಿ ಹೋರಾಟ ಸಮಿತಿ ಸದಸ್ಯರು ನಗರಸಭೆ ಪೌರಾಯುಕ್ತ ಪರಮೇಶ್ ಅವರಿಗೆ ಬುಧವಾರ ಮನವಿ ಮಾಡಿದರು.
ದೊಡ್ಡಬಳ್ಳಾಪುರ ನಗರಸಭೆಯ ಒಳಚರಂಡಿ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರಿನಿಂದಾಗಿ ಮಜರಾಹೊಸಹಳ್ಳಿ ಮತ್ತು ದೊಡ್ಡತುಮಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೆರೆಗಳು ಕಲುಷಿತಗೊಂಡಿದೆ, ಜತೆಗೆ ಅಂತರ್ಜಲ ಕುಡಿಯುಲ ಯೋಗ್ಯವಾಗಿಲ್ಲ ಎಂಬ ವರದಿ ಸಹ ಬಂದಿದೆ, ಶುದ್ಧ ನೀರು ಕೊಡುವಂತೆ ಆಗ್ರಹಿಸಿ ಅರ್ಕಾವತಿ ನದಿ ಹೋರಾಟ ಸಮಿತಿ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹ ಕೂಡ ನಡೆಸಿದೆ, ಜಿಲ್ಲಾ ಉಸ್ತುವರಿ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಜಕ್ಕಲಮಡು ನೀರು ಪೂರೈಸುವಂತೆ ಹೇಳಿದ್ದು, ಟ್ಯಾಂಕರ್ ಮೂಲಕ ಎರಡೂ ಪಂಚಾಯಿತಿಗಳ ಎಲ್ಲ ಗ್ರಾಮಗಳಿಗೂ ಜಕ್ಕಲಮಡು ಜಲಾಶಯದ ನೀರು ಪೂರೈಸುವಂತೆ ಆದೇಶಿಸಿದ್ದರು. ಅದರಂತೆ ಎರಡು ಪಂಚಾಯಿತಿಗಳಿಗೆ ಜಕ್ಕಲಮಡು ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಎಲ್ಲ ಗ್ರಾಮಗಳಿಗೂ ಸಮಪರ್ಕವಾಗಿ ನೀರು ಪೂರೈಕೆ ಆಗುತ್ತಿರಲಿಲ್ಲ, ಇದೀಗ ಎಲ್ಲ ಗ್ರಾಮಗಳಿಗೂ ಜಕ್ಕಲಮಡು ನೀರು ಪೂರೈಸುವಂತೆ ಅರ್ಕಾವತಿ ನದಿ ಹೋರಾಟ ಸಮಿತಿ ನಗರಸಭೆ ಪೌರಾಯುಕ್ತರಿಗೆ ಮನವಿ ಮಾಡಿದ್ದಾರೆ.
ಮನವಿ ಸ್ವೀಕರಿಸಿದ ಪೌರಾಯುಕ್ತ ಪರಮೇಶ್ ಮಾತನಾಡಿ, ಜಿಲ್ಲಾಧಿಕಾರಿ ಆದೇಶದಂತೆ 10 ಟ್ಯಾಂಕರ್‌ಗಳಿಂದ ಜಕ್ಕಲಮಡು ನೀರು ಪೂರೈಕೆ ಮಾಡಲಾಗುತ್ತಿದೆ, ಎಲ್ಲ ಗ್ರಾಮಗಳಿಗೂ ನೀರು ಸಮರ್ಪಕ ರೀತಿಯಲ್ಲಿ ಪೂರೈಕೆ ಮಾಡುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net