ಗ್ರಾಮ ನ್ಯಾಯಾಲಯ ಸ್ಥಾಪನೆ ಮತ್ತು ಜಿಲ್ಲೆಯ ಪ್ರವಾಸೋಧ್ಯಮ ಅಭಿವೃದ್ಧಿಗೆ ವೇಗ: ಎಚ್​.ಕೆ. ಪಾಟೀಲ

26GDG01
Published on

ವಿಜಯವಾಣಿ ಸುದ್ದಿಜಾಲ ಗದಗ
ಗ್ರಾಮ ನ್ಯಾಯಾಲಯಗಳ ಮೂಲಕ ಗ್ರಾಮೀಣ ಜನತೆಗೆ ತುರ್ತು ನ್ಯಾಯ ಒದಗಿಸುವ ಕಾರ್ಯಕ್ಕೆ ಚಾಲನೆ ನೀಡಿರುವ ರಾಜ್ಯ ಸರ್ಕಾರ 100 ಗ್ರಾಮಗಳಲ್ಲಿ ಗ್ರಾಮ ನ್ಯಾಯಾಲಗಳ ಆರಮಭಕ್ಕೆ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಸಚಿವ ಎಚ್​.ಕೆ. ಪಾಟೀಲ ಹೇಳಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜರುಗಿದ ಗಣರಾಜ್ಯೋತ್ಸ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಾರ್ವಭೌಮ, ಸಮಾಜವಾದಿ, ಜ್ಯಾತ್ಯಾತಿತ, ಪ್ರಜಾಸತ್ತಾತ್ಮಕ ಗಣತಂತ್ರವನ್ನು ವಿಧಿಯುಕ್ತವಾಗಿ ಸ್ಥಾಪಿಸಿದ್ದೇವೆ. ಈ ಹಿನ್ನೆಲೆ ಸಾಮಾಜಿಕ, ಆಥಿರ್ಕ, ರಾಜಕೀಯ, ಶೈಣಿಕ ನ್ಯಾಯ ನೀಡುವ ಉದ್ದೇಶದಿಂದ ಹಲವು ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಲಾಗಿದೆ. ಅದರಲ್ಲಿ ಗ್ರಾಮ ನ್ಯಾಯಾಲಯಗಳು ಒಂದಾಗಿದೆ ಪಡೆಯುವ ಅಧಿಕಾರ ನೀಡಿದೆ. ಎಲ್ಲ ಸಮಸ್ಯೆಗಳಿಗೆ ಪರಿಹಾರ ಪ್ರಜಾಪ್ರಭುತ್ವದಲ್ಲಿದೆ ಎಂದು ಸಚಿವ ಎಚ್​.ಕೆ.ಪಾಟೀಲ ಹೇಳಿದರು.
ಹೃದ್ರೋಗ ಪರೀೆ ಮತ್ತು ಚಿಕಿತ್ಸೆಗಾಗಿ ಜಿಮ್ಸ್​ ನಲ್ಲಿ ಕ್ಯಾತ್​ಲ್ಯಾಬ್​ ಟಕ, ನಗರದಲ್ಲಿ ವ್ಯಾಪಾರ, ಸಂಸತಿ ಮತ್ತು ವಸ್ತು ಪ್ರದರ್ಶನ ಕೇಂದ್ರ ಸ್ಥಾಪಿಸುವ ಉದ್ದೇಶದಿಂದ ಪ್ರಾಧಿಕಾರ ರಚನೆ, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಲಕ್ಕುಂಡಿ ಗ್ರಾಮದಲ್ಲಿ 83 ಲಕ್ಷ ರೂಗಳಲ್ಲಿ ಪ್ರವಾಸಿ ಭವನ ನವೀಕರಣ, ಕೆರೆ ತಡೆಗೋಡೆ ಕಾಮಗಾರಿ, ವಿದ್ಯುತ್​ ದೀಪ, ವಿದ್ಯುತ್​ ಚಾಲಿತ ವಾಹನ ಸೇವೆ, ಗದುಗಿನ ವೀರನಾರಾಯಣ, ತ್ರಿಕೂಟೇಶ್ವರ ದೇವಸ್ಥಾನ, ಜುಮ್ಮಾ ಮಸೀದಿ ಅಭಿವೃದ್ಧಿ ಹಾಗೂ ಶಿರಹಟ್ಟಿಯ ಕಿರೇಶ್ವರ ದೇವಸ್ಥಾನಕ್ಕೆ ಆಗಮಿಸುವ ಪ್ರವಾಸಿಗರಿಗೆ ಸೌಲಭ್ಯ, ದೇವಸ್ಥಾನ ಅಭಿವೃದ್ಧಿ ಕಾಮಗಾರಿಗೆ, ಗದಗ ತಾಲೂಕಿನ ಹೊಸಳ್ಳಿ ಗ್ರಾಮದ ಬೂದೀಶ್ವರ ಗದ್ದುಗೆಯ ಶಿಲಾ ಮಂಟಪ ನಿರ್ಮಾಣ ಕಾಮಗಾರಿಗೆ ತಲಾ 1 ಕೋಟಿಯಂತೆ ಒಟ್ಟು 5 ಕೋಟಿ ರೂ.ಗಳ ಅನುದಾನ ವಿತರಣೆ, ತಾಲೂಕಿನ ಸೊರಟೂರು ವಲಯದ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಅಂದಾಜು 8.50 ಕೋಟಿ ವೆಚ್ಚದಲ್ಲಿ ಜಂಗಲ್​ ಲಾಡ್ಜ್​, ರೆಸಾರ್ಟ್​ ನಿಮಿರ್ಸಲು ಭೂಮಿ ಪೂಜೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿಯಲ್ಲಿ 2.49 ಕೋಟಿ ರೂ ಅನುದಾನದಲ್ಲಿ ಹಾಗೂ ಗಜೇಂದ್ರಗಡದಲ್ಲಿ 3.26 ಕೋಟಿ ರೂ. ಒಟ್ಟು 5.75 ಕೋಟಿ ರೂ. ಮೆಟ್ರಿಕ ನಂತರದ ಬಾಲಕಿಯರ ವಸತಿ ನಿಲಯಗಳ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಎಚ್​.ಕೆ. ಪಾಟೀಲ ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಗದಗ, ನರಗುಂದ, ಮುಂಡರಗಿ ತಾಲೂಕುಗಳಲ್ಲಿ ಮೆಟ್ರಿಕ್​ ಪೂರ್ವ ಹಾಗೂ ಲೆ$್ಮಶ್ವರದಲ್ಲಿ ಮೆಟ್ರಿಕ್​ ನಂತರದ ವಸತಿ ನಿಲಯಗಳ ಕಾಮಗಾರಿಗಳನ್ನು 26 ಕೋಟಿ ರೂ.ಗಳ ಅನುದಾನದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ 36.49 ಕೋಟಿ ರೂ.ಗಳಲ್ಲಿ ಗದಗ ತಾಲೂಕಿನ ಬೆಟಗೇರಿ ಗದಗ, ಹತಿರ್, ಮುಂಡರಗಿ ತಾಲೂಕಿನ ಮೇವುಂಡಿಯಲ್ಲಿ ಮೊರಾಜಿರ್ ದೇಸಾಯಿ ವಸತಿ ಶಾಲೆಗಳ ಕಾಮಗಾರಿಗಳ ಆರಂಭಿಸಲಾಗಿದೆ ಎಂದು ಸಚಿವರು ಹೇಳಿದರು.
ವಿವಿಧ ಶಸ್ತ್ರ ಪಡೆಗಳಿಂದ ಎಚ್​.ಕೆ. ಪಾಟೀಲ ಗೌರವ ವಂಧನೆ ಸ್ವೀಕರಿಸಿದರು. ಸಾಧಕರಿಗೆ ಸನ್ಮಾನ ಜರುಗಿತು. ಸಂವಿಧಾನ ಸಾಗೃತಿ ಜಾಥಾಗೆ ಎಚ್​.ಕೆ. ಪಾಟೀಲ ಚಾಲನೆ ನೀಡಿದರು. ಪ್ರಧಾನ ಮಂತ್ರಿ ಆವಾಸ್​ ಯೋಜನೆಯಡಿಯಲ್ಲಿ 2017-18ನೇ ಸಾಲಿನಲ್ಲಿ ಅನುಮೋದನೆಗೊಂಡ ಪರಿಶಿಷ್ಟ ಜಾತಿ, ಪಂಗಡದ 127 ಲಾನುಭವಿಗಳಿಗೆ ಅಮೃತ ನಗರೋತ್ಥಾನದ ಲಾನುಭವಿಗಳಿಗೆ ತಲಾ 65000 ರೂ.ಗಳನ್ನು ವಿತರಿಸಿದರು.
ವಿಧಾನ ಪರಿಷತ್​ ಸದಸ್ಯ ಎಸ್​. ವಿ. ಸಂಕನೂರ, ಅಧ್ಯೆ ಉಷಾ ದಾಸರ, ಉಪಾಧ್ಯೆ ಸುನಂದಾ ಬಾಕಳೆ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ. ಎಸ್​. ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಉಪವಿಭಾಗಾಧಿಕಾರಿ ಡಾ. ವೆಂಕಟೇಶ ನಾಯ್ಕ, ತಹಸೀಲ್ದಾರ ಶ್ರೀನಿವಾಸಮೂತಿರ್ ಕುಲಕಣಿರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net