ಮೈಸೂರಿನ ವಿವಿಧೆಡೆ ಸಂಭ್ರಮದ ಗಣರಾಜ್ಯೋತ್ಸವ

republic day celebration
Published on

ಮೈಸೂರು: ನಗರದ ವಿವಿಧೆಡೆ ಸಂಘ ಸಂಸ್ಥೆಗಳು, ಶಾಲಾ, ಕಾಲೇಜುಗಳಲ್ಲಿ ಶುಕ್ರವಾರ ಸಡಗರ ಸಂಭ್ರಮದೊಂದಿಗೆ ಗಣರಾಜ್ಯೋತ್ಸವ ಆಚರಿಸಲಾಯಿತು.

ಅಗ್ರಹಾರದ ಅಕ್ಕನ ಬಳಗ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾವೇರಿ ಬಳಗ ಮತ್ತು ಹಿರಣ್ಮಯಿ ಪ್ರತಿಷ್ಠಾನ ವತಿಯಿಂದ ಗಣರಾಜ್ಯೊ ೀತ್ಸವ ಪ್ರಯುಕ್ತ ‘ನಮ್ಮ ದೇಶ ಶ್ರೇಷ್ಠ ಭಾರತ ’ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಾಹಿತಿ ಬನ್ನೂರು ಕೆ. ರಾಜು ಮಾತನಾಡಿ, ಅಂಬೇಡ್ಕರ್ ರಚಿಸಿದ ಸಂವಿಧಾನವು ಸರ್ವರನ್ನು ಕತ್ತಲೆಯಿಂದ ಬೆಳಕಿನತ್ತ ಕರೆದೊಯ್ಯುವ ದೀವಿಗೆಯಾಗಿದ್ದು, ಇಂಥ ಸಂವಿಧಾನಕ್ಕೆ ಕಿಂಚಿತ್ತು ಅಪಾಯವಾದರೂ ಅದರ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.

ದೇಶ ಪ್ರೇಮ ಬಿಂಬಿಸುವಂತಹ ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಭಾಷಣ ಸ್ಪರ್ಧೆಯಲ್ಲಿ ಜಯಲಕ್ಷ್ಮೀ ಹಿರಿಯ ಪ್ರಾಥಮಿಕ ಶಾಲೆಯ ಬಿ.ಬಿ.ಅಮೀನಾ (ಪ್ರ), ಅಕ್ಕನ ಬಳಗ ಹಿರಿಯ ಪ್ರಾಥಮಿಕ ಶಾಲೆಯ ಸಂದೀಪ್(ದ್ವಿ) ಮತ್ತು ರಸ ಪ್ರಶ್ನೆ ಸ್ಪರ್ಧೆಯಲ್ಲಿ ಲಲಿತ ಕಲಾಮಂದಿರದ ಹಿರಿಯ ಪ್ರಾಥಮಿಕ ಶಾಲೆಯ ಕಿರಣ್(ಪ್ರ), ಶ್ರೀಕಾಂತ ಹಿರಿಯ ಪ್ರಾಥಮಿಕ ಶಾಲೆಯ ಬಂದೇ ಗೌಡ (ದ್ವಿ) ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ಬುಶ್ರಾ ಅಂಜುಮ್ (ಪ್ರ), ಆತಿಯಾ ಕೌಶಿಕ್ (ದ್ವಿ) ಬಹುಮಾನ ಪಡೆದರು.

ಕಾವೇರಿ ಬಳಗದ ಅಧ್ಯಕ್ಷೆ ಎನ್. ಕೆ. ಕಾವೇರಿಯಮ್ಮ,ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ. ಸಂಗಪ್ಪ, ಅಕ್ಕನ ಬಳಗ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಗುಣಾವತಿ, ಜ್ಞಾನ ವಿಜ್ಞಾನ ಸಮಿತಿಯ ಮುಖ್ಯಸ್ಥ ಎಚ್.ವಿ. ಮುರಳೀಧರ್, ಚಿತ್ರಕಲಾ ಶಿಕ್ಷಕ ಮನೋಹರ್ ಇದ್ದರು.

ಸಿದ್ದಾರ್ಥನಗರದ ಜಿಎಸ್‌ಎಸ್‌ಎಸ್ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ವಿದ್ಯಾಸಂಸ್ಥೆ ಸಂಯೋಜಕ ಬಿ.ಕೆ.ನಟರಾಜ್, ಶೈಕ್ಷಣಿಕ ಸಂಯೋಜಕಿ ಸುಮನಾ, ಕಾಲೇಜು ಪ್ರಾಂಶುಪಾಲರಾದ ಶಾಹಿದಾ ಬಾನು, ಶಾಲಾ ಮುಖ್ಯಶಿಕ್ಷಕಿ ಎಸ್.ಆರ್.ಹೇಮಲತಾ ಹಾಗೂ ಇತರರು ಇದ್ದರು.

ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಕೃಷ್ಣ ಹೊಂಬಾಳ್ ಮಾತನಾಡಿ, ಭಾರತದಲ್ಲಿ ಹಲವು ಧರ್ಮ, ಜಾತಿ, ಜನಾಂಗ, ಭಾಷೆಗಳು, ಹಲವು ಸವಾಲುಗಳು ಇದ್ದರೂ ಪ್ರಜಾಪ್ರಭುತ್ವವನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡು ಯಶಸ್ವಿಯಾಗಿದ್ದೇವೆ. ಇದು ನಮ್ಮ ಭಾರತೀಯರ ಮತ್ತು ಭಾರತ ಸಂವಿಧಾನದ ವಿಶೇಷತೆಯಾಗಿದೆ ಎಂದರು. ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಧ್ವಜಾರೋಹಣ ನೆರವೇರಿಸಿದರು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್. ಪ್ರತಿಭಾ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್. ಸೋಮಶೇಖರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net