

ಇನ್ನರ್ ವೀಲ್ ಕ್ಲಬ್ ಆಫ್ ಗದಗ್ ಮಿಡ್ ಟೌನ್ ದಿಂದ ೭೫ ನೇಯ ಗಣರಾಜ್ಯೋತ್ಸವ ದಿನಾಚರಣೆಯನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ- ೧ ಗದಗ್, ಆಚರಿಸಲಾಯಿತು.
ಮುಖ್ಯ ಅತಿಥಿಗಳಾದ ನಿವೃತ್ತ ಇಂಜಿನಿಯರ್, ಶ್ರೀ ವೆಂಕಟೇಶ್ ಗುಡಿ ಅವರು ಧ್ವಜಾರೋಹಣ ನೆರವೇರಿಸಿದರು. ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀಮತಿ ವಿಜಯ. ಎಸ್ ಜಕ್ಕರೆಡ್ಡಿ ಅವರು ಸಂವಿಧಾನದ ಕುರಿತು ಮಾತನಾಡಿದರು, ಕ್ಲಬ್ಬಿನ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಬಿರಾದಾರ್, ಕಾರ್ಯದರ್ಶಿಯಾದ ಶ್ರೀಮತಿ ಪ್ರೀತಿ ಶಿವಪ್ಪನಮಠ, ಖಜಾಂಚಿ ಆದ ರಾಣಿ ಚಂದಾವರಿ,ಶಕುಂತಲಾ ಮುಳಗುಂದ, ಶ್ರೀಮತಿ ಶಾರದಾ ರಂಗ್ರೇಜಿ ಉಪಸ್ಥಿತರಿದ್ದರು.
75 ನೆಯ ಗಣರಾಜ್ಯೋತ್ಸವ ಅಂಗವಾಗಿ ಶಾಲಾ ಮಕ್ಕಳಿಗೆ ಇನ್ನರ್ ವೀಲ್ ಕ್ಲಬ್ ಆಫ್ ಗದಗ್ ಮಿಡ್ ಟೌನ್ ದಿಂದ ಊಟದ ತಾಟುಗಳನ್ನು ನೀಡಲಾಯಿತು ಇದರ ಪ್ರಾಯೋಜಕತ್ವವನ್ನು ಶ್ರೀಮತಿ ಉಮಾ ಹೆರಕಲ್ ವಹಿಸಿಕೊಂಡಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಎಫ್. ಎಸ್. ಹಿರೇಮಠ್, ಶ್ರೀಮತಿ ವಿಜಯಲಕ್ಷ್ಮಿ ಕುಂಟೋಜಿ ವಂದನಾರ್ಪಣೆಯನ್ನು ಮಾಡಿದರು