

ನಾಪೋಕ್ಲು: ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮದ ಬಕ್ಕದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 76ನೇ ಗಣರಾಜ್ಯೋತ್ಸವ ವನ್ನು ಆಚರಣೆ ಮಾಡಲಾಯಿತು.
ಬಕ್ಕ ಗ್ರಾಮದ ಅಂಗನವಾಡಿ ಕೇಂದ್ರದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಬೆಟ್ಟಗೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೈತಡ್ಕ ಎಸ್.ದೇವಯ್ಯ ಧ್ವಜಾರೋಹಣ ನೆರವೇರಿಸಿ ದಿನದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.
ಶ್ರೀಕೃಷ್ಣ ಸ್ವಸಹಾಯ ಸಂಘದ ಕಾರ್ಯದರ್ಶಿ ಹೊಸೊಕ್ಲು ಮೊನ್ನಪ್ಪ, ಗ್ರಾಮಸ್ಥರಾದ ಫುದಯನೆರವನ ಸದಾನಂದ, ವಿಕಿನ್, ರವಿಕಲ, ಆಶಾ, ವೀಣಾ, ಕುಂಜಿಲನ ಲೋಕನಾಥ್, ನೈಯಣಿರ ಶಾಂತಿ, ಹೊಸೊಕ್ಲು ಪುಷ್ಪಲತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.