ಪೊದಾರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಗಣರಾಜ್ಯೋತ್ಸವ ಸಂಭ್ರಮ

podar
ಕೊಟ್ಟಾರ ಚೌಕಿ ಸಮಿಪದ ಪೊದಾರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನಿವೃತ್ತ ಸೈನಿಕ ಸುಬ್ಬಪ್ಪ ಪಾಟಾಳಿ .ಎನ್ ಧ್ವಜಾರೋಹಣ ನೆರವೇರಿಸಿ ದಿ ಕ್ಯಾಂಪಸ್ ರೂಟ್ಸ್‌ನ್ನು ಬಿಡುಗಡೆ ಗೊಳಿಸಿದರು.
Published on

ಮಂಗಳೂರು: ಕೊಟ್ಟಾರ ಚೌಕಿ ಸಮಿಪದ ಪೊದಾರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ನಿವೃತ್ತ ಸೈನಿಕ ಸುಬ್ಬಪ್ಪ ಪಾಟಾಳಿ .ಎನ್ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿ, ಉತ್ತಮ ಸವಾಜ ನಿರ್ವಾಣದ ಕಾಯಕದಲ್ಲಿ ನಾವೆಲ್ಲರೂ ತೊಡಗಿಕೊಳ್ಳಬೇಕು. ವಿದ್ಯಾರ್ಥಿಗಳು ಶಿಕ್ಷಣ ಪಡೆದು ವಿವಿಧ ಹುದ್ದೆಗಳನ್ನು ಅಲಂಕರಿಸುವ ನಡುವೆ ದೇಶ ರಕ್ಷಣೆ ವಾಡುವತ್ತಲೂ ಯೋಚಿಸಬೇಕು. ನಮ್ಮ ಸಂವಿಧಾನ ಭಾರತ ದೇಶದ ಶಕ್ತಿಯಾಗಿದೆ. ಹಲವರ ತ್ಯಾಗ ಮತ್ತು ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಲಭಿಸಿ, ಗಣರಾಜ್ಯ ರಚಿಸಲು ಸಾಧ್ಯವಾಯಿತು. ನಿಷ್ಠ್ಠೆಯಿಂದ ಅದನ್ನು ಉಳಿಸಿಕೊಳ್ಳುವುದು ಪ್ರತಿ ನಾಗರಿಕನ ಕರ್ತವ್ಯ ಎಂದರು.

ಶಾಲಾ ಆಡಳಿತಾಧಿಕಾರಿ ಕಿಶನಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ರಾಷ್ಟ ಭಕ್ತಿಗೀತೆ ನೃತ್ಯ ಹಾಗೂ ಪ್ರಹಸನಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ದಿ ಕ್ಯಾಂಪಸ್ ರೂಟ್ಸ್‌ನ್ನು ಬಿಡುಗಡೆ ಗೊಳಿಸಲಾಯತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net