ಗಣರಾಜ್ಯೋತ್ಸವ ಅರ್ಥಪೂರ್ಣ ಆಚರಣೆ

CTD 18 DC MEETING (-01
Published on

ಚಿತ್ರದುರ್ಗ: ಗಣರಾಜ್ಯೋತ್ಸವ ಆಚರಣೆ ಪೂರ್ವ ಸಿದ್ಧತಾ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜರುಗಿತು. ಸಭೆಯಲ್ಲಿ ಮಾತನಾಡಿದ ಡಿ ಸಿ ಜಿಆರ್‌ಜೆ ದಿವ್ಯಾಪ್ರಭು, ಗಣರಾಜ್ಯೋತ್ಸವ ಆಚರಣೆ ದೇಶ ಭಕ್ತಿ ಹಾಗೂ ಭಾರತ ಸಂವಿಧಾನ ಆಚರಣೆ ಪ್ರತೀಕವಾಗಿದ್ದು,ಕಾರ‌್ಯಕ್ರಮವ ನ್ನು ಅರ್ಥಪೂರ್ಣಗೊಳಿಸಲು ವಿವಿಧ ಇಲಾಖೆಗಳ ಅಧಿಕಾರಿ ಗಳು ಸಮನ್ವಯತೆಯಿಂದ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು.

ಜ.26ರಂದು ಬೆಳಗ್ಗೆ 9ಕ್ಕೆ ನಗರದ ಮುರುಘರಾಜೇಂದ್ರ ಕ್ರೀಡಾಂಗಣ(ಸರ್ಕಾರಿ ವಿಜ್ಞಾನ ಕಾಲೇಜು)ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಅವರು ಗಣರಾಜ್ಯೋ ತ್ಸವದಲ್ಲಿ ಧ್ವಜಾರೋಹಣ ನೆರವೇರಿಸುವರು. ಮೈದಾನದ ಸ್ವಚ್ಛತೆ,ದೀಪಾಲಂಕಾರ ಸಹಿತ ಸಮಾರ ಂಭದ ಯಶಸ್ಸಿಗೆ ಅಗತ್ಯ ವ್ಯವಸ್ಥೆಗಳಿರ ಬೇಕು.

ಪೆರೇಡ್ ಕುರಿತಂತೆ ಪೊಲೀಸ್ ಇಲಾಖೆಗೆ ಜವಾಬ್ದಾರಿ ವಹಿಸಿದ ಡಿಸಿ,ಪೊಲೀಸ್,ಹೋಂಗಾ ರ್ಡ್,ಅರಣ್ಯಇಲಾಖೆ,ಅಬಕಾರಿ,ಎನ್‌ಸಿಸಿ ಸೇರಿದಂತೆ ವಿವಿಧ ತುಕಡಿಗಳು ಪಥ ಸಂಚಲನಕ್ಕೆ ಸಜ್ಜುಗೊಳಿಸ ಬೇಕೆಂದರು.

ಭಾರತ ಸೇವಾದಳದಿಂದ ತರಬೇತಿ ಹೊಂದಿದ ಶಿಕ್ಷಕರು,ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟು ಗಳು,ಪ್ಯಾರಾ ಒಲಂಪಿಕ್‌ನಲ್ಲಿ ಸಾ ಧನೆ ಮಾಡಿದ ಸಾಧಕರು ಹಾಗೂ ಡಾಕ್ಟರೇಟ್ ಪದವಿ ಪಡೆದ ಪ್ರಗತಿಪರ ರೈತರನ್ನು ಸನ್ಮಾನಿಸಲು ಸಭೆ ತೀರ್ಮಾನಿಸಿತು.

ಜಿಪಂ ಸಿಇಒ ಎಂ.ಎಸ್.ದಿವಾಕರ್,ಎಸಿ ಆರ್. ಚಂದ್ರಯ್ಯ,ಡಿಎಚ್‌ಒ ಡಾ.ರಂಗನಾಥ್,ಡಿಡಿಪಿಐ ಕೆ.ರವಿಶಂಕರ ರೆಡ್ಡಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಭಾರತಿ ಬಣಕಾರ್,ಆಹಾರ ಇಲಾಖೆ ಜಂಟಿ ನಿರ್ದೇ ಶಕ ಮಧುಸೂದನ್, ಜಿಲ್ಲಾ ಕೈಗಾರಿಕೆ ಇಲಾಖೆ ಡಿಡಿ ಆನಂದ್ ಮತ್ತಿತರ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net