ಹೋರಾಟಕ್ಕೆ ದೊಮ್ಮಸಂದ್ರ ಗ್ರಾಪಂ ಪ್ರತಿನಿಧಿಗಳ ಸಾಥ್​

22 08 2025_BGR_RURAL-PAGE_7A
ಮುತ್ತಾನಲ್ಲೂರಲ್ಲಿ ಕೈಗೊಂಡಿರುವ ಅರ್ನಿದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ದೊಮ್ಮಸಂದ್ರ ಗ್ರಾಪಂ ಚುನಾಯಿತ ಪ್ರತಿನಿಧಿಗಳು ಭಾಗಿಯಾಗಿ ರೈತರಿಗೆ ಬೆಂಬಲ ಸೂಚಿಸಿದರು. ಆನೇಕಲ್​ ತಾಲೂಕು ಭೂ ಸ್ವಾಧಿನ ವಿರೋಧಿ ಹೋರಾಟ ಸಮಿತಿ ಗೌರವಾಧ್ಯಕ್ಷ ವಿಶ್ವನಾಥ್​ ರೆಡ್ಡಿ, ಪಧಾಧಿಕಾರಿಗಳಾದ ಕೇಶವ್​, ಪ್ರಸನ್ನ ಕುಮಾರ್​ ಇದ್ದರು.
Published on

ಸರ್ಜಾಪುರ : ಆನೇಕಲ್​ ತಾಲೂಕಿನ ಸರ್ಜಾಪುರ ಹೋಬಳಿಯಲ್ಲಿ ಭೂಸ್ವಾಧಿನ ವಿರೋಧಿಸಿ ಮುತ್ತಾನಲ್ಲೂರು ಗ್ರಾಮದಲ್ಲಿ ಕೈಗೊಂಡಿರುವ ಅರ್ನಿದಿಷ್ಟಾವಧಿ ಧರಣಿ ಗುರುವಾರ 43 ದಿನ ಪೂರೈಸಿದ್ದು, ದೊಮ್ಮಸಂದ್ರ ಗ್ರಾಪಂ ಚುನಾಯಿತ ಪ್ರತಿನಿಧಿಗಳು ಭಾಗಿಯಾಗಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸರ್ಜಾಪುರ ಹೋಬಳಿಯ 4 ಗ್ರಾಮ ಪಂಚಾಯಿತಿಗಳ 12 ಹಳ್ಳಿಗಳ 2,451 ಎಕರೆ ಫಲವತ್ತಾದ ಜಮೀನುಗಳನ್ನು ಕೈಗಾರಿಕಾ ಹೆಸರಿನಲ್ಲಿ ಸರ್ಕಾರ ಬಲವಂತವಾಗಿ ಕಸಿದುಕೊಂಡು ರೈತರ ಹೊಟ್ಟೆ ಮೇಲೆ ಹೊಡೆಯುವುದನ್ನು ಕೂಡಲೇ ಕೈಬಿಡಬೇಕು ಎಂದು ದೊಮ್ಮಸಂದ್ರ ಗ್ರಾಪಂ ಸದಸ್ಯ ಬಿ.ಸಿ.ಉಮೇಶ್​ ಬಾಬು ಒತ್ತಾಯಿಸಿದರು.

ಆನೇಕಲ್​ ತಾಲೂಕಿನಲ್ಲಿ 5 ಕೈಗಾರಿಕಾ ಪ್ರದೇಶಗಳು, ನಾಲ್ಕು ವಸತಿ ಬಡಾವಣೆಗಳು ನಿರ್ಮಾಣವಾಗಿದ್ದು, 20ವರ್ಷಗಳ ಹಿಂದೆ ಫೆರಿಫಲ್​ ರಿಂಗ್​ ರೋಡ್​ ಮತ್ತು ರಾಷ್ಟ್ರೀಯ ಹೆದ್ದಾರಿಗಳಿಗೆ ಸಾವಿರಾರು ಎಕರೆ ಜಮೀನನ್ನು ವಶಪಡಿಸಿಕೊಂಡಿದೆ. ಆದರೂ ತಾಲೂಕಿನಲ್ಲಿ ಸರ್ಕಾರ ಭೂಸ್ವಾಧಿನಕ್ಕೆ ಮುಂದಾಗಿರುವುದು ದುರಂತ ಎಂದು ಆತಂಕವ್ಯಕ್ತಪಡಿಸಿದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವೀಂದ್ರ ಮಾತನಾಡಿ, ಎಲೆಕ್ಟ್ರಾನಿಕ್​ ಸಿಟಿ, ಜಿಗಣಿ, ಬೊಮ್ಮಸಂದ್ರ, ವೀರಸಂದ್ರ ಮತ್ತು ಅತ್ತಿಬೆಲೆ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳ ತ್ಯಾಜ್ಯ ಮತ್ತು ಕಲ್ಮಶಗಳಿಂದ ತಾಲೂಕಿನ ಬಹುತೇಖ ಕೆರೆಗಳು ಕಲುಷಿತವಾಗಿದ್ದು, ಶುದ್ಧ ಪರಿಸರಕ್ಕೆ ಮಾರಕವಾಗಿದೆ. ಹಾಗಾಗಿ ಸರ್ಜಾಪುರ ರೈತರು ಕೃಷಿ ಆಧಾರಿತ ಚಟುವಟಿಕೆಗಳಾದ ತೋಟಗಾರಿಕೆ ಬೆಳೆಗಳು ಮತ್ತು ಹೂವು ಬೆಳೆದು ಜತೆಗೆ ಪ್ರತಿ ಗ್ರಾಮ ಪ್ರತಿ ಕುಟುಂಬದಲ್ಲಿ ಹೈನುಗಾರಿಕೆ ಮೂಲಕ ಜೀವನೋಪಾಯಕ್ಕಾಗಿ ಬದುಕು ಕಟ್ಟಿಕೊಂಡಿದ್ದಾರೆ. ಸದರಿ ಜಮೀನುಗಳ ಭೂಸ್ವಾಧಿನವಾದರೆ ಸಾವಿರಾರು ಕುಟುಂಬಗಳು ಬೀದಿ ಪಾಲಾಗುತ್ತವೆ. ಆದ್ದರಿಂದ ಕೂಡಲೇ ಸರ್ಕಾರ ಆನೇಕಲ್​ ತಾಲೂಕಿನಲ್ಲಿ ಭೂಸ್ವಾದಿನ ಪ್ರಕ್ರಿಯೆ ಕೈ ಬಿಡಬೇಕು ಎಂದು ಒತ್ತಾಯಿಸಿದರು. ತಾಲೂಕು ಭೂ ಸ್ವಾಧಿನ ವಿರೋಧಿ ಹೋರಾಟ ಸಮಿತಿ ಹೋರಾಟಕ್ಕೆ ಅನುಕೂಲವಾಗಲೆಂದು ದೊಮ್ಮಸಂದ್ರ ಗ್ರಾಪಂ ಸದಸ್ಯ ಬಿ.ಸಿ.ಉಮೇಶ್​ ಬಾಬು 50,000 ಸಾವಿರ ರೂಪಾಯಿ ನೆರವು ನೀಡಿದರು. ದೊಮ್ಮಸಂದ್ರ ಗ್ರಾಪಂ ಸದ್ಯಸರಾದ ಕೆ.ಸುರೇಶ್​, ರಾಜೇಶ್​, ನಾರಾಯಣಪ್ಪ, ಕೃಷ್ಣಾರೆಡ್ಡಿ, ಸಂತೋಷ್​, ಮುರಳಿ, ಮುಖಂಡರಾದ ಜಯಣ್ಣ, ಶ್ರೀನಿವಾಸರೆಡ್ಡಿ, ಅಶೋಕರೆಡ್ಡಿ, ಸೀನಾ, ರಾಮಕೃಷ್ಣ, ಮಧು ಬಾಬು, ಕಾರ್ತಿಕ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net