

ಬೆಂಗಳೂರು: ‘ಜೇನು ತುಪ್ಪದ ಬಣ್ಣವಿದೆ, ಕಬ್ಬಿನ ಹಾಲಿಗಿಂತ ಸಿಹಿಯಿದೆ...’ ನೀರಾ ಪೇಯ ಉತ್ಪಾದಿಸಲು ಅನುಮತಿ ಕೊಟ್ಟವರಿಗೆ ಧನ್ಯವಾದ ತಿಳಿಸಲೆಂದು ಅನುಮತಿ ಪಡೆದು ವಿಧಾನಸಭೆ ಮೊಗಸಾಲೆಯಲ್ಲೇ ಪರಿಶುದ್ಧ ನೀರಾ ವಿತರಿಸಿದವರಿಗೆ ಸ್ಪೀಕರ್, ಪ್ರತಿಪಕ್ಷ ನಾಯಕ, ಸಚಿವ- ಶಾಸಕರಿಂದ ಬಂದ ಪ್ರತಿಕ್ರಿಯೆ.
ಹಾಪ್ಕಾಮ್್ಸ ಜತೆಗೂಡಿ ಬೆಂಗಳೂರಿನ 12 ಸ್ಥಳಗಳಲ್ಲಿ ಪರಿಶುದ್ಧ ನೀರಾ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಹುಬ್ಬಳ್ಳಿಯಲ್ಲೂ ಮಾರಾಟ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ದಾವಣಗೆರೆ ಹಾಗೂ ಬಳ್ಳಾರಿಯಲ್ಲಿ ಮಾರಾಟ ವ್ಯವಸ್ಥೆಗೆ ಸಿದ್ಧತೆಗಳಾಗುತ್ತಿವೆ.
ಸಕ್ಕರೆ, ಬೆಲ್ಲ, ಐಸ್ಕ್ರೀಮ್ ಪರಿಶುದ್ಧ ನೀರಾ ತಯಾರಿಸುವಲ್ಲಿನ ಯಶಸ್ಸು ಸ್ಪೂರ್ತಿ ತುಂಬಿದೆ. ತೆಂಗು ನೀರಾ ಸಕ್ಕರೆ, ಬೆಲ್ಲ ಉತ್ಪಾದಿಸಲಾಗುತ್ತದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಐಸ್ ಕ್ರೀಮ್ ಕೂಡ ಮಾರುಕಟ್ಟೆಗೆ ಬರಲಿದ್ದು, ತೆಂಗು ಬೆಳೆಯುವ ಜಿಲ್ಲೆಗಳಿಗೆ ಹೊಸ ಆಯಾಮ ನೀಡಲಿದೆ ಎಂದು ‘ಮಲೆನಾಡು ನಟ್ಸ್ ಮತ್ತು ಸ್ಪೈಸ್ ರೈತ ಉತ್ಪಾದಕ ಕಂಪನಿ’ ಅಧ್ಯಕ್ಷ ಮನೋಹರ ಮಸ್ಕಿ ವಿಜಯವಾಣಿಗೆ ತಿಳಿಸಿದರು.
ಪರಿಶುದ್ಧ ನೀರಾ ಉತ್ಪಾದನೆ ಹೇಗೆ?
ತೆಂಗಿನ ಮರದ ಹೊಂಬಾಳೆಯನ್ನು (ಹೂ) ಶೈತ್ಯೀಕರಿಸಿದ ಸರಣಿ ತಂತ್ರಜ್ಞಾನದಿಂದ ಇಳಿಸಿದ ನಂತರ ಬೆಳಗ್ಗೆ ಮತ್ತು ಸಂಜೆ ತಲಾ 1.5 ಕೆ.ಜಿ. ಐಸ್ ಹಾಕಿ ಪ್ರತಿ ಹನಿ ನೀರಾವನ್ನು 0 ಡಿಗ್ರಿ ಉಷ್ಣಾಂಶದಲ್ಲಿ ಸಂಗ್ರಹಿಸಿ ಸಂಸ್ಕರಿಸಿದಾಗ ರಾಸಾಯನಿಕ, ಆಲ್ಕೋಹಾಲ್ವುುಕ್ತ ನೀರಾ ಪೇಯ ತಯಾರಾಗುತ್ತದೆ. ಈ ಪೇಯ 17 ಅಮೈನೋ ಆಸಿಡ್ಗಳ ಜತೆಗೆ ಹೇರಳವಾಗಿ ಕಬ್ಬಿಣ, ರಂಜಕ ವಿಟಮಿನ್ಗಳನ್ನು ಹೊಂದಿರುತ್ತದೆ.
ಕಂಪನಿಯ ನಿರಂತರ ಪ್ರಯತ್ನ
ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ನೀರಾ ಉತ್ಪಾದನೆಗೆ ಅನುಮತಿ ನೀಡಿದರೆ, 2016ರಲ್ಲಿ ತೆಂಗು ನೀರಾ ನೀತಿ ಜಾರಿಗೆ ಬಂತು. ಅಬಕಾರಿ ಕಾಯ್ದೆಗೆ 2017ರಲ್ಲಿ ತಿದ್ದುಪಡಿಯಾಗಿ ರೈತ ಉತ್ಪಾದಕ ಕಂಪನಿಗಳಿಗೆ ಮಾತ್ರ ತೆಂಗು ನೀರಾ ಉತ್ಪಾದನೆಗೆ ಅವಕಾಶ ಕಲ್ಪಿಸಲಾಯಿತು. ಮಲೆನಾಡು ನಟ್ಸ್ ಅಂಡ್ ಸ್ಪೈಸ್ ಕಂಪನಿ ವರ್ಷಾನುಗಟ್ಟಲೆ ಪ್ರಯೋಗ ಮಾಡಿ ಪರಿಶುದ್ಧ ನೀರಾ ಪೇಯ ತಯಾರಿಸುವಲ್ಲಿ ಯಶಸ್ಸು ಸಾಧಿಸಿತು.