ಪ್ರತಿನಿಧಿ ಆಯ್ಕೆ ಅಧ್ಯಕ್ಷ, ಕಾರ್ಯದರ್ಶಿಯಿಂದ ಲೋಪ: ನಿರ್ದೇಶಕ ಎಸ್.ಮಂಜುನಾಥ ಹೇಳಿಕೆ

ಹರಪನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಮಂಗಳವಾರ ಸುದ್ದಿಗೋಷ್ಠಿ ನಡೆಸಿದರು. ಉಪಾಧ್ಯಕ್ಷೆ ನೀಲಮ್ಮ, ನಿರ್ದೇಶಕರಾದ ಕೆಂಚಮ್ಮ, ಕರಿಬಸವನಗೌಡ, ಎ.ಬಸಪ್ಪ, ಇದ್ದರು.
ಹರಪನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಮಂಗಳವಾರ ಸುದ್ದಿಗೋಷ್ಠಿ ನಡೆಸಿದರು. ಉಪಾಧ್ಯಕ್ಷೆ ನೀಲಮ್ಮ, ನಿರ್ದೇಶಕರಾದ ಕೆಂಚಮ್ಮ, ಕರಿಬಸವನಗೌಡ, ಎ.ಬಸಪ್ಪ, ಇದ್ದರು.
Published on

ಹರಪನಹಳ್ಳಿ: ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿಗೆ ನಡೆಯುವ ಚುನಾವಣೆಗೆ ತಾಲೂಕಿನ ಬೆಣ್ಣಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಒಬ್ಬ ಪ್ರತಿನಿಧಿ ಆಯ್ಕೆ ಮಾಡುವ ಸಭೆಯಲ್ಲಿ ಲೋಪವೆಸಗಿದ್ದು, ತಾಲೂಕು ಸಹಕಾರ ನಿಬಂಧಕರಿಗೆ 7 ನಿರ್ದೇಶಕರು ದೂರು ನೀಡಿದ್ದೇವೆ ಎಂದು ವಿಎಸ್‌ಎಸ್‌ಎನ್ ನಿರ್ದೇಶಕ ಎಸ್.ಮಂಜುನಾಥ ಹೇಳಿದರು.


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಜು.31ಕ್ಕೆ ಪ್ರತಿನಿಧಿ ಆಯ್ಕೆಗೆ ಕರೆಯಲಾಗಿದ್ದ ಸಭೆಗೆ 12 ನಿರ್ದೇಶಕರು ಹಾಜರಾಗಿದ್ದರು. ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳು ನಿರ್ದೇಶಕ ಬಿ.ಕೆ.ಪ್ರಕಾಶ್ ಹೆಸರನ್ನು ಸೂಚಿಸಿದ್ದಾರೆ. ಈ ವೇಳೆ ಎಸ್.ಮಂಜುನಾಥ ಕೂಡ ನಾನು ಪ್ರತಿನಿಧಿ ಆಕಾಂಕ್ಷಿ ಎಂದು ಸಭೆಯ ಗಮನಕ್ಕೆ ತಂದಿದ್ದಾರೆ.

ಬಿ.ಕೆ.ಪ್ರಕಾಶ್ ವಿರುದ್ಧವಾಗಿ 7 ನಿರ್ದೇಶಕರು ಎಸ್.ಮಂಜುನಾಥ ಆಯ್ಕೆಯನ್ನು ಒಪ್ಪಿದ್ದಾರೆ. ಸಹಕಾರ ಸಂಘದ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯದರ್ಶಿ ಏಕ ನಿರ್ಣಯದಿಂದ ಕ್ರಮ ಕೈಗೊಂಡಿದ್ದಾರೆ. ಎಸ್.ಮಂಜುನಾಥ ಪರವಾಗಿ ಹೆಚ್ಚು ನಿರ್ದೇಶಕರಿದ್ದು, ಪ್ರತಿನಿಧಿಯಾಗಲು ಸಿಂಧು ಎಂದು ಘೋಷಣೆಗೆ ತಕರಾರು ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.


ನಿರ್ದೇಶಕ ಶೌಕತ್ ಅಲಿ ಮಾತನಾಡಿ, ನಿರ್ದೇಶಕರ ಸಭೆಯಲ್ಲಿ ಬಿ.ಕೆ.ಪ್ರಕಾಶ್ ಪ್ರತಿನಿಧಿ ಮಾಡಲು ಯಾವುದೇ ತಕರಾರು ಇರಲಿಲ್ಲ. ಸತತ 4 ಬಾರಿ ಅವರನ್ನು ಆಯ್ಕೆ ಮಾಡಿದ್ದೇವೆ. ಇವರು ಯಾವ ನಿರ್ದೇಶಕರ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ. 7 ಜನ ನಿರ್ದೇಶಕರ ಅಸಮಾಧಾನ ಉಂಟಾಗಿದ್ದು, ಅವರನ್ನು ಪ್ರತಿನಿಧಿಯಾಗಿ ಘೋಷಣೆ ಮಾಡಿರುವುದು ಆಶ್ಚರ್ಯ ತಂದಿದ್ದು, ಕಾನೂನು ಬದ್ದವಾಗಿ ಆಯ್ಕೆ ಮಾಡಬೇಕು ಎಂದರು.

ಉಪಾಧ್ಯಕ್ಷೆ ನೀಲಮ್ಮ, ನಿರ್ದೇಶಕರಾದ ಕೆಂಚಮ್ಮ, ಕರಿಬಸವನಗೌಡ, ಎ.ಬಸಪ್ಪ, ಮುಖಂಡರಾದ ಮುತ್ತಿಗಿ ಎಸ್.ಜಂಬಣ್ಣ, ಮಾರುತಿ, ಕೊಟ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net