ಆರ್ಥಿಕ ವರ್ಷದ ‌ವರದಿ ಸಲ್ಲಿಸಲು ಸೂಚನೆ

Screenshot_20240513_172721_Gmail
Published on

ಮಡಿಕೇರಿ:

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಆಹಾರ ಪರವಾನಗಿ ಪಡೆದಿರುವ ತಯಾರಕರು, ರೀ-ಪ್ಯಾಕರ್, ರೀ-ಲೇಬರ್ ಪ್ರತಿ ವರ್ಷ ವಾರ್ಷಿಕ ವಹಿವಾಟಿನ ವಿವರವನ್ನು ಆಯಾಯ ಆರ್ಥಿಕ ವರ್ಷದ ಮೇ-31 ರ ಕಾಲಮಿತಿಯೊಳಗೆ https:\\foscos.fssai.gov.in  ವೆಬ್‍ಸೈಟ್‍ನಲ್ಲಿ ತಪ್ಪದೇ ಸಲ್ಲಿಸಬೇಕು.  ತಪ್ಪಿದ್ದಲ್ಲಿ ವಾರ್ಷಿಕವಾಗಿ ಕಾಯ್ದೆಯಡಿ ನಿಗಧಿಯಾಗುವ ದಂಡವನ್ನು ಕಡ್ಡಾಯವಾಗಿ ಪಾವತಿಸಿದ ನಂತರವೇ ಪರವಾನಗಿ ನವೀಕರಿಸಲು ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿ ಡಾ.ಇ. ಅನಿಲ್ ಧವನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

       ತಯಾರಕರು, ರೀ-ಪ್ಯಾಕರ್, ರೀ-ಲೇಬಲ್‍ದಾರರು ತಮ್ಮ ಆಹಾರ ಪದಾರ್ಥಗಳ ವಿಶ್ಲೇಷಣಾ ವರದಿಯನ್ನು ಪ್ರತಿ 6 ತಿಂಗಳಿಗೊಮ್ಮ ಎನ್‍ಎಬಿಎಲ್ ಅಕ್ರಿಡಿಯೇಟೆಡ್ ಅಥವಾ ಎಫ್‍ಎಸ್‍ಎಸ್‍ಎಐ ನೋಂದಾಯಿತ ಪ್ರಯೋಗಾಲಯದಲ್ಲಿ ವಿಶ್ಲೇಷಿಸಿ ವರದಿಯನ್ನು ಅಧಿಕೃತ ಅಂರ್ತಜಾಲ ತಾಣದಲ್ಲಿ ತಮ್ಮ ತಮ್ಮ ಲಾಗಿನ್‍ನಲ್ಲಿ ನಮೂದಿಸುವುದು ಕಡ್ಡಾಯವಾಗಿದೆ. 

ಈ ರೀತಿಯಲ್ಲಿ ವಾರ್ಷಿಕ ವಹಿವಾಟಿನ ವಿವರವನ್ನು ಹಾಗೂ ಪ್ರಯೋಗಾಲಯದ ವಿಶ್ಲೇಷಣಾ ವರದಿಯನ್ನು ಸಲ್ಲಿಸಲು ವಿಫಲವಾದಲ್ಲಿ ಮುಂದಿನ ಆಗುಹೋಗುಗಳಿಗೆ ಸಂಬಂಧಿಸಿದ ತಯಾರಕರು, ರೀ-ಪ್ಯಾಕರ್, ರೀ-ಲೇಬಲ್, ಆಹಾರ ಉದ್ಧಿಮೆದಾರರು ಜವಾಬ್ದಾರರಾಗುತ್ತಾರೆ. ಆಹಾರ ನೋಂದಣಿ ಅಥವಾ ಪರವಾನಗಿ ಪಡೆಯದೇ ವ್ಯಾಪಾರ ವಹಿವಾಟು ನಡೆಸುವವರು ತಕ್ಷಣದಲ್ಲೇ ಇಲಾಖೆಯಿಂದ ಆಹಾರ ನೋಂದಣಿ ಅಥವಾ ಪರವಾನಗಿಯನ್ನು ಪಡೆದುಕೊಳ್ಳಬೇಕು. ತಪ್ಪಿದಲ್ಲಿ ಕಾಯ್ದೆಯಡಿ ನೋಟೀಸ್ ಮತ್ತು ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.  

      ಈ ಬಗ್ಗೆ ಹೆಚ್ಚಿನ ಮಾಹಿತಿ ಅವಶ್ಯವಾದಲ್ಲಿ ಅಂಕಿತಾಧಿಕಾರಿಗಳ ಕಚೇರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಜಿಲ್ಲಾ ಸರ್ವೇಕ್ಷಣಾ ಘಟಕದ ಆವರಣ, ಓಂಕಾರೇಶ್ವರ ದೇವಸ್ಥಾನದ ರಸ್ತೆ, ಟೋಲ್‍ಗೇಟ್ ಹತ್ತಿರ, ಮಡಿಕೇರಿ, ಕೊಡಗು ಜಿಲ್ಲೆ ಇಲ್ಲಿಗೆ ಭೇಟಿ ನೀಡಿ ಪಡೆದುಕೊಳ್ಳುವಂತೆ  ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net